ಸುಳ್ಯ: ಹೇಳುವುದಕ್ಕೆ ಅದೊಂದು ಸುಂದರ ಪಾರ್ಕ್. ಸುಳ್ಯ ನಗರದ ತುತ್ತತುದಿಯಲ್ಲಿ ಕಳಶಪ್ರಾಯದಂತಿರುವ ಈ ಪಾರ್ಕ್ ನಲ್ಲಿ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಗುಟ್ಕಾ, ಮದ್ಯ ಸೇವಿಸಿ ತೂರಾಡಲು ಬರುವವರ ಮಧ್ಯೆ ಸಭ್ಯಸ್ಥರು, ಮಹಿಳೆಯರು ಈ ಪಾರ್ಕ್‌ಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ. ಇನ್ನು ಪಾರ್ಕ್ ನ ಉಸ್ತುವಾರಿಗಳು ಮಾತ್ರ ತಮಗೆ ಸಂಬಂಧವಿಲ್ಲದಂತಿದ್ದಾರೆ.
ಕುರುಂಜಿಗುಡ್ಡೆ ಪಾರ್ಕ್‌ಗೆ ಸುಳ್ಯ ನಗರದ ಕುರುಂಜಿಭಾಗ್, ತಾಲೂಕು ಕಚೇರಿ ಹಾಗೂ ನ್ಯಾಯಾಲಯದ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿರುವ ಚಿಕ್ಕದಾದ ಉದ್ಯಾನವನವಾಗಿದ್ದು, ಇಲ್ಲಿ ವಿಶ್ರಾಂತಿಗಾಗಿ ಹಲವಾರು ಜನ ಬಂದು ಹೋಗುತ್ತಾರೆ. ಚಿಕ್ಕ ಮಕ್ಕಳಿಗೆ ಆಟವಾಡಲು ಜಾರು ಬಂಡಿ, ತೂಗುಯ್ಯಾಲೆಗಳಿವೆ. ಹಾಗೇ ಪಕ್ಕದಲ್ಲಿ ಬ್ಯಾಡ್ಮಿಟನ್ ಕೋರ್ಟ್ ಇದೆ. ಹಾಗಾಗಿ ಇಲ್ಲಿ ಹಲವಾರು ಜನ ಬಂದು ಹೋಗುತ್ತಾರೆ.
ಆದರೆ ಇಲ್ಲಿಗೆ ಭೇಟಿ ನೀಡುವ ಜನರಲ್ಲಿ ಬಹುತೇಕ ಯುವಜನತೆ ಇದ್ದು, ಅದರಲ್ಲೂ ಮಾದಕ ವ್ಯಸನಿಗಳೇ ಹೆಚ್ಚು. ಇದರಿಂದಾಗಿ ಸಭ್ಯಸ್ಥರಿಗೂ ತೊಂದರೆಯಾಗಿದೆ. ಪಾರ್ಕ್‌ಗೆ ಸರಿಯಾದ ಆವರಣ ಗೋಡೆ ಇಲ್ಲ ಹೂ ತೋಟದ ಪಕ್ಕ ಬೀದಿ ದೀಪ ಬಿಟ್ಟರೆ ಸುತ್ತ ಮುತ್ತ ಸಂಪೂರ್ಣ ಕತ್ತಲು. ಹಾಗಾಗಿ ಸಂಜೆ ಹೊತ್ತಲ್ಲಿ ಸುತ್ತಲೂ ನೋಡಿದರೆ ಬೀಯರ್ ಬಾಟಲ್, ಸಿಗರೇಟ್, ಗುಟ್ಕಾ ಪ್ಯಾಕೆಟ್ ಗಳು ಇನ್ನೂ ಸುತ್ತಲು ಪೊದೆಗಳು. ಇದೊಂದು ಸಾರ್ವಜನಿಕ ಉದ್ಯಾನವನವಾಗಿ ಈ ರೀತಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರು ಇದ್ದನ್ನು ಕೇಳುವವರೇ ಇಲ್ಲ.
ಇದೇ ಪಾರ್ಕ್ ನ ಆವರಣದಲ್ಲಿ ಒಂದು ಪೂರ್ತಿಗೊಳ್ಳದ ಕಟ್ಟಡವಿದ್ದು ಈ ಕಟ್ಟಡವು ಅಕ್ರಮ ಚಟುವಟಿಕೆಗೆ ಸಾಥ್ ನೀಡುವಂತಿದೆ. ಒಟ್ಟಾರೆ ಸುಳ್ಯ ನಗರದಲ್ಲಿ ಅನೈತಿಕ, ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Kshetra Samachara
28/09/2022 10:43 pm