ಮಲ್ಪೆ: ಇಲ್ಲಿನ ಹೋಟೆಲ್ ವೊಂದರ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಲ್ಪೆಯ ಹೊಟೇಲೊಂದರ ನಿರ್ದೇಶಕರಾಗಿರುವ ಪ್ರತಿಮಾ ಮನೋಹರ್ ಅವರು ಪೊಲೀಸರಿಗೆ ದೂರು ನೀಡಿದ್ದು. ಸೆ.15 ರಂದು 10-12 ಮಂದಿ ಅಪರಿಚಿತರು ಪ್ರತಿಮಾ ಮನೋಹರ್ ಅವರ ಹೋಟೆಲ್ ನ ಎದುರು ಇರುವ ತೋಡಿಗೆ ಮಣ್ಣು ಹಾಕಿದ್ದು, ಇದಕ್ಕೆ ಹೋಟೆಲ್ ನ ಸಿಬ್ಬಂದಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸೆ.16 ರಂದು ಬೆಳಿಗ್ಗೆ ಮತ್ತೆ 10 ರಿಂದ 12 ಮಂದಿ ಅಪರಿಚಿತ ವ್ಯಕ್ತಿಗಳು ಹೋಟೆಲ್ ನ ಅವರಣದ ಎದುರು ಇರುವ ತೋಡಿಗೆ ಲಾರಿಯಲ್ಲಿ ಮಣ್ಣು ತಂದು ಹಾಕಿದ್ದರು. ಈ ವೇಳೆ ಇದಕ್ಕೆ ಹೋಟೆಲ್ ಸಿಬ್ಬಂದಿಯವರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದಾಗ ಅಪರಿಚಿತರು ಸಿಬ್ಬಂದಿಯವರಿಗೆ ಆವಾಚ್ಯ ಶಬ್ದಗಳಿಂದ ಬೈದು, ದೈಹಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ನಷ್ಟವುಂಟು ಮಾಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/09/2022 08:30 pm