ಪುತ್ತೂರು: ಅನ್ಯಕೋಮಿನ ವ್ಯಕ್ತಿಯೋರ್ವನು ಅಂಗಡಿಗೆಂದು ಬಂದಿದ್ದ ಮಹಿಳೆಯ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಪುತ್ತೂರು ತಾಲೂಕಿನ ತಿಂಗಳಾಡಿಯ ಸೂಪರ್ ಬಝಾರ್ ನಲ್ಲಿ ನಡೆದಿದೆ.
ಸೆ.14ರಂದು ಸಂಜೆ ವೇಳೆ ಸರ್ವೇಯ ನೇರೋಳ್ತಡ್ಕದ ಮಹಿಳೆಯೋರ್ವರು ಈ ಸೂಪರ್ ಬಝಾರ್‌ಗೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲೆಂದು ಬಂದಿದ್ದಾರೆ. ಈ ವೇಳೆ ಸೂಪರ್ ಬಝಾರ್ ಮಾಲಕ ಹೊರಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಬದ್ರುದ್ದೀನ್ ಎಂಬಾತ ಈ ಮಹಿಳೆಯ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಗಾಬರಿಗೊಂಡ ಆಕೆ ಬೊಬ್ಬೆಯಿಟ್ಟಿದ್ದಾರೆ. ಪರಿಣಾಮ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಈ ವೇಳೆ ಬದ್ರುದ್ದೀನ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸ್ಥಳೀಯರು ಜಮಾಯಿಸಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಸೆ.15ರ ಬೆಳಗ್ಗೆ 8ಗಂಟೆಯೊಳಗೆ ಆರೋಪಿಯನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
Kshetra Samachara
14/09/2022 10:55 pm