ಮಲ್ಪೆ: ಸಾಲದ ಹೊರೆಗೆ ಬೇಸತ್ತು ಮನನೊಂದ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕೊಡವೂರು ಕಾನಂಗಿ ನಿವಾಸಿ ಬೀನಾರಾಣಿ (34) ಆತ್ಮಹತ್ಯೆ ಮಾಡಿಕೊಂಡವರು. ಅವರು 4 ವರ್ಷಗಳಿಂದ ಶಿರ್ವದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತಿ 9 ತಿಂಗಳ ಹಿಂದೆಯಷ್ಟೆ ಸಾಲಭಾದೆಯಿಂದ ಗುಂಡಿಬೈಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಪತಿ ಮಾಡಿದ ಸಾಲ ಇವರ ಮೇಲಿದ್ದು ಬರುತ್ತಿರುವ ಸಂಬಳದಲ್ಲಿ ಸಾಲ ತೀರಿಸಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಲ್ಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kshetra Samachara
14/09/2022 09:11 am