ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಳದಲ್ಲಿ ಸ್ನೇಹಿತನಿಂದಲೇ ಚೂರಿ ಇರಿತ ಆಸ್ಪತ್ರೆಗೆ ದಾಖಲು

ಕಾರ್ಕಳ : ಕಾರ್ಕಳ ತಾಲೂಕಿನ ಮಾಳದಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನೇ ಚೂರಿಯಿಂದ ಇರಿದ ಘಟನೆ ನಡೆದಿದೆ . ಭರತ್ ಎಂಬಾತ ತನ್ನ ಸ್ನೇಹಿತ ನಾಗರಾಜ ಪೂಜಾರಿ ಎಂಬವನಿಗೆ ಚೂರಿಯಿಂದ ಇರಿದಿದ್ದಾನೆ. ಇವರಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು ಭರತ್ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಕ್ಕೆ ನಾಗರಾಜ್ ಪೂಜಾರಿಯು ಕೈಯಲ್ಲಿ ಚೂರಿಯನ್ನು ಹಿಡಿದುಕೊಳ್ಳಬೇಡ ಎಂದು ಹೇಳಿದ್ದನು.

ಈ ಸಂದರ್ಭ ಇಬ್ಬರ ನಡುವೆ ಜಗಳ ನಡೆದಿದ್ದು ಭರತ್ ತನ್ನ ಕೈಯಲ್ಲಿದ್ದ ಚೂರಿಯಿಂದ ಒಮ್ಮೆಲೇ ನಾಗರಾಜ್ ಹೊಟ್ಟೆಗೆ ಇರಿದಿದ್ದಾನೆ.ಇದರಿಂದ ಗಾಯಗೊಂಡ ನಾಗರಾಜ್ ನನ್ನು ಕೂಡಲೇ ಕಾರ್ಕಳದ ಆಸ್ಪತ್ರೆಯ ಕರೆ ತಂದಿದ್ದು ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದರು.

ಭರತ್ ತನ್ನ ಸ್ನೇಹಿತ ಎನ್ನುವ ಕಾರಣಕ್ಕೆ ಈ ಬಗ್ಗೆ ಠಾಣೆಗೆ ದೂರು ನೀಡದೆ ಮುಚ್ಚಿಟ್ಟಿದ್ದನು .ಆದರೆ ಗುರುವಾರ ಸಂಜೆ ವೇಳೆಗೆ ನಾಗರಾಜ್ ನಿಗೆ ಚೂರಿ ಇರಿದ ನೋವು ಜಾಸ್ತಿಯಾಗಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

03/09/2022 03:28 pm

Cinque Terre

5.48 K

Cinque Terre

1