ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ದೋಣಿ ಮಗುಚಿ ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

ಮಲ್ಪೆ: ಸಣ್ಣ ಮೀನುಗಾರಿಕೆ ದೋಣಿಯೊಂದು ಮಗುಚಿ ಅದರಲ್ಲಿದ್ದ ಬಾಲಕ ನೀರುಪಾಲಾಗಿ ನಾಲ್ಕು ದಿನಗಳ ಬಳಿಕ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ. ಮೂಲತಃ ಉತ್ತರ ಕಬ್ನಡದ ಮೂವರು ಮೀನುಗಾರರು ಸಣ್ಣ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಕಸ್ಮಾತ್ತಾಗಿ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ನೀರಿಗೆ ಬಿದ್ದಿದ್ದು ಇಬ್ಬರು ಈಜಿ ಬಚಾವಾಗಿದ್ದರು.

ದೋಣಿಯಲ್ಲಿದ್ದ ರಾಮಕೃಷ್ಣ ಎಂಬವರ ಮಗ ನಾಗರಾಜ ( 16) ಎಂಬ ಬಾಲಕ ಈಜಲಾಗದೆ ನೀರು ಪಾಲಾಗಿದ್ದ. ಕಳೆದ ನಾಲ್ಕು ದಿನಗಳಿಂದ ಸತತ ಹುಡುಕಾಟದ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದೆ. ಮಲ್ಪೆಯ ಆಪತ್ಭಾಂಧವ ಈಶ್ವರ್ ಮಲ್ಪೆ ಉತ್ತರಕನ್ನಡಕ್ಕೆ ತೆರಳಿ ತೀವ್ರ ಶೋಧ ನಡೆಸಿದ್ದರು. ಸ್ಥಳೀಯ ಮೀನುಗಾರರೂ ಸಾಕಷ್ಟು ಶೋಧಕಾರ್ಯ ನಡೆಸಿದ್ದರು.

Edited By : Vijay Kumar
Kshetra Samachara

Kshetra Samachara

02/09/2022 12:30 pm

Cinque Terre

4.68 K

Cinque Terre

0