ಬೈಂದೂರು : 25ರ ಯುವಕ 17ರ ಅಪ್ರಾಪ್ತೆಯನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಸಂಪರ್ಕ ಹೊಂದಿದ್ದಲ್ಲದೇ ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉಪ್ಪುಂದ ಗ್ರಾಮದ ಕೋಣದ ಮನೆ ನಿವಾಸಿ ನವೀನ್ ಯಾನೇ ಸಚಿನ್ ಖಾರ್ವಿ(25) ಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ.
ಆರೋಪಿ ನವೀನ್ 17 ವರ್ಷ ಪ್ರಾಯದ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಉಪ್ಪುಂದ ಶಂಕರ ಕಲಾ ಮಂದಿರದ ಬಳಿ ಹಾಡಿಯಲ್ಲಿ ನಾಗದೇವರ ಬನದ ಶೆಡ್ಡಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಆಗಸ್ಟ್ 18ರಂದು ರಾತ್ರಿ 8 ಗಂಟೆ ಸುಮಾರಿಗೆ ಅಪ್ರಾಪ್ತೆಯ ತಾಯಿ ಅಡುಗೆ ಮನೆಯಲ್ಲಿದ್ದ ಸಂದರ್ಭ ಮನೆಗೆ ಬಂದ ಆರೋಪಿ ಸಚಿನ್ ಯಾನೇ ನವೀನ್ ಖಾರ್ವಿ ಸಂತ್ರಸ್ಥೆಯ ಕೈ ಹಿಡಿದು ಎಳೆದು ಅಪಹರಿಸಿಕೊಂಡು ಹೋಗಿದ್ದ. ಬಳಿಕ ಜಿರಲೆಗೆ ಹಾಕುವ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಉಡುಪಿಯ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ತಕ್ಷಣ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
Kshetra Samachara
30/08/2022 12:39 pm