ಉಡುಪಿ: ಎರಡು ದಿನಗಳ ಹಿಂದೆ ಮಣಿಪಾಲದ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಎರಗಿದ್ದ ಬೀದಿ ನಾಯಿಗಳು,ಆಕೆಗೆ ತೀವ್ರ ಗಾಯ ಮಾಡಿತ್ತು. ಗಾಯಗೊಂಡ ವಿದ್ಯಾರ್ಥಿನಿಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಬಾಲಕಿಯನ್ನು ನ್ಯಾ.ಶರ್ಮಿಲಾ ಎಸ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ನ್ಯಾ.ಶರ್ಮಿಲಾ ಎಸ್, ಬೀದಿ ನಾಯಿಗಳ ಹಾವಳಿ ಉಡುಪಿ ಮಣಿಪಾಲದಲ್ಲಿ ಹೆಚ್ಚಾಗಿದೆ. ಮೊನ್ನೆ ಬಾಲಕಿ ಮೇಲೆ ನಾಯಿ ಎರಗಿದ್ದು ಗಂಭೀರ ವಿಷಯ. ಪ್ರಾಣಿ ದಯಾ ಸಂಘ ಮತ್ತು ನಗರಸಭೆ ಬೀದಿನಾಯಿಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಮೊನ್ನೆಯ ಘಟನೆ ಪುನರಾವರ್ತನೆ ಆಗಬಾರದು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
27/08/2022 09:34 pm