ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ಸಂಪರ್ಕ: ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಅಂದರ್

ಬೈಂದೂರು: 25ರ ಯುವಕ 17ರ ಅಪ್ರಾಪ್ತೆಯನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಸಂಪರ್ಕ ಹೊಂದಿದ್ದಲ್ಲದೇ ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಆರೋಪಿಯನ್ನು ಉಪ್ಪುಂದ ಗ್ರಾಮದ ಕೋಣದ ಮನೆ ನಿವಾಸಿ ನವೀನ್ ಯಾನೇ ಸಚಿನ್ ಖಾರ್ವಿ(25) ಎಂದು ಗುರುತಿಸಲಾಗಿದೆ.

ಆರೋಪಿ ನವೀನ್ 17 ವರ್ಷ ಪ್ರಾಯದ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಸಲುಗೆ ಬೆಳೆಸಿದ್ದಾನೆ. ಬಳಿಕ ಉಪ್ಪುಂದ ಶಂಕರ ಕಲಾ ಮಂದಿರದ ಬಳಿ ಹಾಡಿಯಲ್ಲಿ ನಾಗದೇವರ ಬನದ ಶೆಡ್ಡಿನಲ್ಲಿ ಜೊತೆ ಸೇರುತ್ತಿದ್ದರೆನ್ನಲಾಗಿದೆ. ಆಗಸ್ಟ್ 18ರಂದು ರಾತ್ರಿ 8 ಗಂಟೆ ಸುಮಾರಿಗೆ ಅಪ್ರಾಪ್ತೆಯ ತಾಯಿ ಅಡುಗೆ ಮನೆಯಲ್ಲಿದ್ದ ಸಂದರ್ಭ ಮನೆಗೆ ಬಂದ ಆರೋಪಿ ಸಚಿನ್ ಯಾನೇ ನವೀನ್ ಖಾರ್ವಿ ಸಂತ್ರಸ್ಥೆಯ ಕೈ ಹಿಡಿದು ಎಳೆದು ಅಪಹರಿಸಿಕೊಂಡು ಹೋಗಿದ್ದು, ಬಳಿಕ ಜಿರಲೆಗೆ ಹಾಕುವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದೀಗ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ತಕ್ಷಣ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಸಚಿನ್ ಯಾನೆ ನವೀನ್ ಖಾರ್ವಿಗೆ ನ್ಯಾಯಾಂಗ ಬಂಧನವಿಧಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

26/08/2022 07:45 am

Cinque Terre

8.07 K

Cinque Terre

0

ಸಂಬಂಧಿತ ಸುದ್ದಿ