ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದ, ಮಂಡ್ಯ ಮೂಲದ ಬೆಂಗಳೂರು ನಿವಾಸಿ ಶಿವು ಯಾನೆ ಸ್ವಾಮಿ ಅವರ ಮೃತದೇಹವು ಘಟನೆ ನಡೆದ ಸ್ಥಳದಿಂದ ಸುಮಾರು 1 ಕಿ. ಮೀ ಕೆಳಗಡೆ ಪತ್ತೆಯಾಗಿದೆ.
ಸತತವಾಗಿ ನಾಲ್ಕು ದಿನದ ಕಾರ್ಯಚರಣೆ ಬಳಿಕ ಇಂದು ಸಂಜೆ ಮೃತದೇಹ ಪತ್ತೆಯಾಗಿದೆ. ಸುಮಾರು 15 ಜನ ನುರಿತ ಈಜುಗಾರರು, ಅಗ್ನಿಶಮಾಕ ದಳ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಗ್ರಹರಕ್ಷಕ ದಳ, ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದ್ದರು.
Kshetra Samachara
24/08/2022 08:26 pm