ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಠ ಮಾಡಿದ್ದಕ್ಕೆ ಕಾದ ಸೌಟಿನಿಂದ ಮಗುವಿಗೆ ಬರೆ ಹಾಕಿದ ತಾಯಿ

ಸುಳ್ಯ: ಮಗು ಹಠ ಮಾಡುತ್ತಿದೆ ಎಂದು ಕೋಪಗೊಂಡ ಕ್ರೂರಿ ತಾಯಿಯೋರ್ವಳು ಮಗುವಿಗೆ ಬೆಂಕಿಯ ಬರೆ ಹಾಕಿದ್ದಾಳೆ. ನಾಲ್ಕು ವರ್ಷ ಐದು ತಿಂಗಳ ಪ್ರಾಯದ ಹೆಣ್ಣು ಮಗು ಇದಾಗಿದ್ದು ಈ ಘಟನೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ.

ಹೌದು ಗಾಂಧಿನಗರದ ನಾವೂರು ನಿವಾಸಿಯಾದ ಮಹಿಳೆ ಕಾದ ಸೌಟಿನಿಂದ ತನ್ನ ಮಗುವಿಗೆ ಬರೆ ಎಳೆದಿದ್ದಾಳೆ. ಈಕೆ ಮೊದಲ ಗಂಡನಿಂದ ವಿಚ್ಛೇದನ ಪಡೆದು ಮಂಜೇಶ್ವರ ನಿವಾಸಿಯೋರ್ವನ ಜತೆ ವಾಸಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಸದ್ಯ ಆರೋಪಿ ತಾಯಿ ಸುಳ್ಯದ ನಾವೂರಿನಲ್ಲಿ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳಂತೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿಡಿಪಿಒ ರಶ್ಮಿ ನೆಕ್ರಾಜೆ ಮಗುವಿನ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಸಿಡಿಪಿಒ ನೇತೃತ್ವದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೆಲ್ಲದರ ನಡುವೆ ಅಧಿಕಾರಿಗಳ ಜೊತೆಗೂ ಸಹ ಆರೋಪಿ ದರ್ಪ ತೋರಿದ್ದಾಳೆ. ತಾನೇ ಸೌಟು ಕಾಯಿಸಿ ಗಾಯ ಮಾಡಿದ್ದು, ನೀವೇನು ಮಾಡಿಕೊಳ್ಳುತ್ತೀರಿ? ಎಂದಿದ್ದಾಳಂತೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯಲ್ಲಿ

ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

17/08/2022 08:26 pm

Cinque Terre

16.27 K

Cinque Terre

2