ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೌಟುಂಬಿಕ ಕಲಹದಿಂದ ಬೇಸತ್ತು ಅವಳಿ ಮಕ್ಕಳ ಜೊತೆ ಮನೆ ತೊರೆದಿದ್ದ ಮಹಿಳೆಯ ರಕ್ಷಣೆ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ಕಣ್ಣೀರಿಡುತ್ತಿದ್ದರು..ವಿಷಯ ತಿಳಿದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಘಟನೆ ಜುಲೈ ರಾತ್ರಿ ನಡೆದಿದೆ.

ಮಹಿಳೆ ಮೂಲತಃ ಹೊರರಾಜ್ಯದವಳಾಗಿದ್ದು, ಗಂಡನೊಂದಿಗೆ ಮನಸ್ತಾಪಗೊಂಡು ಬೇಸತ್ತು ನಗರ ಬಸ್ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗಲು ಕಣ್ಣೀರಿಡುತ್ತಿದರು, ಬಸ್ ನಿರ್ವಾಹಕರೊಬ್ಬರಿಂದ ಮಾಹಿತಿ ಪಡೆದ ವಿಶು ಶೆಟ್ಟಿ, ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಪೊಲೀಸ್ ಸಹಾಯ ದೊರಕಿದೆ, ಮಾಹಿತಿಯನ್ನು ನಗರ ಪೊಲೀಸ್ ಠಾಣೆಗೆ ನೀಡಲಾಗಿದೆ.ಸಖಿ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನೆಯಾಗಿದ್ದು 24*7ರಂತೆ ನಿಟ್ಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಯಾವುದೇ ಸಮಯದಲ್ಲಿ ಅಸಹಾಯಕತೆಗೆ ಒಳಗಾದ ಮಹಿಳೆಯರು ಸಖಿ ಸೆಂಟರನ್ನು ಸಂಪರ್ಕಿಸಿ ಸಮಾಲೋಚನೆ, ಕಾನೂನು ನೆರವು ಮತ್ತು ವಸತಿಯನ್ನು ಪಡೆಯಬಹುದು.

Edited By : Nagaraj Tulugeri
Kshetra Samachara

Kshetra Samachara

08/08/2022 04:53 pm

Cinque Terre

9.26 K

Cinque Terre

2

ಸಂಬಂಧಿತ ಸುದ್ದಿ