ಮುಲ್ಕಿ: ಕಿನ್ನಿಗೋಳಿ- ಮೂಡುಬಿದಿರೆ ಪರಿಸರದಲ್ಲಿ ಮಹಿಳೆ ಸೇರಿ ಅಪರಿಚಿತ ಮೂವರು ವಂಚಕರು ಹಲವರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬುಧವಾರ ಕಿನ್ನಿಗೋಳಿಯಲ್ಲಿ ಯುವಕನೊಬ್ಬನಿಗೆ ಡಾಲರ್ ವಿನಿಮಯ ಹಾಗೂ ಕರೆನ್ಸಿ ಬಗ್ಗೆ ಮಾಹಿತಿ ಕಲೆ ಹಾಕುವ ನೆಪದಲ್ಲಿ ಬರೋಬ್ಬರಿ 20000 ರೂ. ವಂಚನೆ ಮಾಡಿ ಪರಾರಿಯಾಗಿದ್ದಾರೆ.
ಬಳಿಕ ಸ್ಥಳೀಯರ ಜೊತೆ ಮಂಗಳೂರಿಗೆ ಹೋಗುವ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿ, ಕಿನ್ನಿಗೋಳಿ ಆಸುಪಾಸಿನ ಬಾರ್, ಅಂಗಡಿಗಳಲ್ಲಿ ವಂಚನೆಗೆ ಯತ್ನಿಸಿ ವಿಫಲರಾಗಿದ್ದಾರೆ.
ಈ ನಡುವೆ ಕಿನ್ನಿಗೋಳಿಯ ಸಾಮಾಜಿಕ ಕಾರ್ಯಕರ್ತ, ಪಿಗ್ಮಿ ಸಂಗ್ರಾಹಕ ಸ್ಟ್ಯಾನಿ ಪಿಂಟೋ ಹಣ ಲೆಕ್ಕ ಮಾಡುತ್ತಿರುವುದನ್ನು ಗಮನಿಸಿ, ಅವರ ಬಳಿ ಬಂದು 2000 ರೂ. ಚಿಲ್ಲರೆ ಬೇಕು ಎಂದು ಕೇಳಿದಾಗ ಅವರಿಗೆ ವಂಚಕರ ಬಗ್ಗೆ ಗುಮಾನಿ ಬಂದು
ಚಿಲ್ಲರೆ ಇಲ್ಲ ಎಂದು ಹೇಳಿದ್ದಾರೆ.
ಇದಾದ ಸ್ವಲ್ಪ ಹೊತ್ತಿನ ಬಳಿಕ ಮಿತ್ರನಿಗೆ ವಂಚನೆ ಆಗಿರೋದು ಗೊತ್ತಾಗಿ ಕೂಡಲೇ ಸ್ಟ್ಯಾನಿ ಪಿಂಟೋ ಮುಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಚಹರೆ, ಬಂದ ಕಾರು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಮುಲ್ಕಿ ಹಾಗೂ ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
29/07/2022 09:29 am