ಬೈಂದೂರು: ಬೈಂದೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಕರಾವಳಿ ಶಾಖೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶಾಖೆಯ ಹೊರಗಿನ ಗೇಟ್ ಹಾಗೂ ಶಟರ್ ಒಳಭಾಗವನ್ನು ಮುರಿದು ಒಳನುಗ್ಗಿದ ಕಳ್ಳರು ಕೌಂಟರ್ ಮುಂತಾದ ಕಡೆ ಹಣಕ್ಕಾಗಿ ತಡಕಾಡಿದ್ದಾರೆ.
ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ. ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ವಸ್ತುಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.
Kshetra Samachara
22/07/2022 10:57 pm