ಉಡುಪಿ: ತನ್ನ ತಾಯಿಯನ್ನು ನಿಂದಿಸಿದ ಎಂಬ ಕಾರಣಕ್ಕೆ ಕುಡಿದ ಅಮಲಿನಲ್ಲಿದ್ದ ಇಬ್ಬರು ಸೇರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಉಡುಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಉಡುಪಿ ಮಣಿಪಾಲದ ರಾಷ್ಟ್ರೀಯ ಹೆದ್ದಾರಿ ನಡುವಿನ ಇಂದ್ರಾಳಿ ರೈಲ್ವೆ ಜಂಕ್ಷನ್ ಸಮೀಪ ಈ ಘಟನೆ ಸಂಭವಿಸಿದೆ.ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ಕುಮಾರ್ (32) ಎಂದು ಗುರುತಿಸಲಾಗಿದೆ.
ಕುಟ್ಟಿ ಮತ್ತು ನವೀನ್ ಎಂಬುವರು ಇಂದ್ರಾಳಿಯ ಬಾರೊಂದರಲ್ಲಿ ಕುಡಿದು ನಡೆದುಕೊಂಡು ಬರುತ್ತಿದ್ದರು.ಈ ವೇಳೆ ಕುಮಾರ್ (32) ಎಂಬಾತ ಕುಡಿದ ಅಮಲಿನಲ್ಲಿ ನವೀನ್ ಮತ್ತು ಕುಟ್ಟಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮೂವರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ.
ಈ ವೇಳೆ ಸಿಟ್ಟಿನಿಂದ ನವೀನ್ ಮತ್ತು ಕುಟ್ಟಿ ಸೇರಿ ಮರದ ದೊಣ್ಣೆಯಿಂದ ಕುಮಾರನ ತಲೆಗೆ ಹೊಡೆದಾಗ ಆತ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
Kshetra Samachara
21/07/2022 08:39 pm