ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಐವರು ಅರೆಸ್ಟ್, ಉಳಿದವರಿಗೆ ಶೋಧ

ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕಳೆದ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮಸೂದ್ ಎಂಬ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್,ಸುಧೀರ್, ಶಿವ,ರಂಜಿತ್,ಹಾಗೂ ಸದಾಶಿವ ಬಂಧಿತ ಅರೋಪಿಗಳು.

ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿ ಇಬ್ರಾಹಿಂ ಶಾನಿಫ್ ಎಂಬುವರು ಪೊಲೀಸ್ ದೂರು ನೀಡಿದ್ರು. ಕಳಂಜ ಗ್ರಾಮದ ವಿಷ್ಣು ನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಸೂದ್ ಹಾಗೂ ಸುಧೀರ್ ನಡುವೆ ಹೊಡೆದಾಟ ನಡೆದಿತ್ತು. ಬಳಿಕ ಮಾತುಕತೆ ಮೂಲಕ ಇತ್ಯರ್ಥಪಡಿಸೋಣ ಎಂದು ಹೇಳಿ ಎಂಟು ಮಂದಿಯ ಆರೋಪಿಗಳ ತಂಡ ಮಸೂದ್ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಈ ವೇಳೆ ಅಭಿಲಾಷ್ ಎಂಬಾತ ಬಿದ್ದಿದ್ದ ಬಿಯರ್ ಬಾಟಲ್ ನಿಂದ ಮಸೂದ್ ತಲೆಗೆ ಬಲವಾಗಿ ಹೊಡೆದಿದ್ದ ಎನ್ನಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಸೂದ್ ನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೋಲೀಸರು ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ..

ಮಸೂದ್ ಹಾಗೂ ಸ್ಥಳೀಯ ಯುವಕನೊಂದಿಗೆ ನಿನ್ನೆ ಸಂಜೆ ಗಲಾಟೆ ನಡೆದಿತ್ತು. ಇದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಮಸೂದ್ ನನ್ನು ಕರೆಸಿದ ಸುಧೀರ್,ಅಭಿಲಾಷ್,ರಂಜಿತ್,ಇನ್ನೋರ್ವ ರಂಜಿತ್ ಎಂಬುವವರ 8 ಮಂದಿಯ ತಂಡ ಮಸೂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

20/07/2022 09:24 pm

Cinque Terre

18.34 K

Cinque Terre

7