ಕಾರ್ಕಳ: ಇಲ್ಲಿನ ಕರಿಯಕಲ್ಲು ಹಿಂದೂರುದ್ರಭೂಮಿಯಲ್ಲಿದ್ದಮೃತದೇಹ ದಹನಕ್ಕಾಗಿ ಕಬ್ಬಿಣದ ಚೌಕಟ್ಟಿನ ನಡುವೆ ಇದ್ದ ಸಿಲಿಕಾನ್ ಬ್ಲಾಕ್ ನ್ನು ಕಳ್ಳರು ಕದ್ದೊಯ್ದ ಬಗ್ಗೆ ವರದಿಯಾಗಿದೆ.ನಿನ್ನೆ ರಾತ್ರಿ ಈ ಕಳ್ಳತನ ನಡೆದಿದೆ.
ಜು.15 ರ ತಡರಾತ್ರಿ ಕಳ್ಳರು ಮೃತದೇಹಗಳನ್ನು ಸುಡಲು ಇಟ್ಟಿರುವ ಕಬ್ಬಿಣದ ಚೌಕಟ್ಟು(Frame)ಗಳ ನಡುವೆ ಇರುವ ದೊಡ್ಡ ನಾಲ್ಕು ಸಿಲಿಕಾನ್ ಬ್ಲಾಕ್ ಗಳ ಪೈಕಿ ಒಂದನ್ನು ಕಳವು ಮಾಡಿದ್ದಾರೆ. ಇಂದು ಬೆಳಗ್ಗೆ ಶವ ಸಂಸ್ಕಾರಕ್ಕೆ ತಯಾರಿ ಮಾಡುವ ಸಂದರ್ಭದಲ್ಲಿ ಸಿಲಿಕಾನ್ ಬ್ಲಾಕ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ಕಳವಾದ ಸೊತ್ತು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸಂಚಾರಲಕರು ದೂರು ನೀಡಿದ್ದಾರೆ.
Kshetra Samachara
16/07/2022 06:08 pm