ಸುಳ್ಯ: ಕುಟುಂಬದವರೊಳಗೆ ಆಸ್ತಿ ಪಾಲಿನ ವಿಷಯದಲ್ಲಿ ವಿವಾದ ಭುಗಿಲೆದ್ದು ತಾಯಿ, ಮಗ ಸೇರಿಕೊಂಡು ಮೂವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯದ ನಾಲ್ಕೂರಿನಲ್ಲಿ ನಡೆದಿದೆ.
ನಾಲ್ಕೂರಿನ ಹಾಲೆಮಜಲು ಅಂಬೆಕಲ್ಲು ಸುರೇಶ್ ಎಂಬುವವರ ನೂತನ ಮನೆ ಕೆಲಸ ನಡೆಯುತ್ತಿದ್ದು ಅಲ್ಲಿಗೆ ಆಗಮಿಸಿದ ಸುರೇಶ್ ಅವರ ಅಕ್ಕ ಮೀನಾಕ್ಷಿ ಮತ್ತು ಮಗ ಸೋಹಾನ್ ಆಸ್ತಿ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ.
ಮಾತಿನ ಚಕಮಕಿ ನಡೆದು ಇವರಿಬ್ಬರು ಸುರೇಶ್ ಪತ್ನಿ ಮಂಜುಳಾ ಎಂಬವರಿಗೆ ಹಲ್ಲೆ ಮಾಡಿದಲ್ಲದೆ ಮನೆಕೆಲಸದ ಕಾರ್ಮಿಕರಾದ ಸುಬ್ರಹ್ಮಣ್ಯ ಮತ್ತು ಮಾಧವ ಅವರಿಗೆ ತಲವಾರಿನಿಂದ ಕಡಿದು,ರೀಪಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಏಟು ತಾಗಿದ್ದ ಮೂವರು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Kshetra Samachara
14/07/2022 01:09 pm