ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಬಸ್ ತಂಗುದಾಣದಲ್ಲಿ ರಕ್ತ ಮತ್ತು ಅಂಗಾಂಗ ತುಣುಕುಗಳು ಪತ್ತೆ

ವಿಟ್ಲ: ಸಾರ್ವಜನಿಕ ಬಸ್ ತಂಗುದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾದ ಘಟನೆ ಜೂ.29 ರಂದು ವಿಟ್ಲ ಸಮೀಪದ ಬದನಾಜೆ ಎಂಬಲ್ಲಿ ನಡೆದಿದೆ.

ಬದನಾಜೆ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿತ್ತೇ? ಅಥವಾ ಅಪಘಾತದಿಂದ ಗಾಯಗೊಂಡವರು ಯಾರದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಕರಣದ ಸತ್ಯಾಂಶ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

29/06/2022 10:48 am

Cinque Terre

11.99 K

Cinque Terre

0