ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಕಾಡುಪ್ರಾಣಿ ಬೇಟೆಯಾಡಿ ಸಾಗಿಸುತ್ತಿದ್ದ ಐವರ ಬಂಧನ!

ಕೋಟ: ಕಾಡುಪ್ರಾಣಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ವಾಹನವನ್ನು ನಿನ್ನೆ ಮುಂಜಾನೆ ಸಾಯಿಬ್ರಕಟ್ಟೆ ಚೆಕ್ ಪೋಸ್ಟ್‌ನಲ್ಲಿ ತಡೆದ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಪೇತ್ರಿಯ ರಾಘವೇಂದ್ರ(33), ಪ್ರಶಾಂತ್ (35), ಅರುಣ(36), ಚೇತನ್(25), ದೀಕ್ಷಿತ್(23) ಬಂಧಿತರು. ಆರೋಪಿಗಳಿಂದ ಒಂದು ಬರಿಂಕ, ಒಂದು ಮೊಲ, ನಳಿಕೆ ಕೋವಿ, ಐದು ಮೊಬೈಲ್ ಕಾರು, ಹಾಗೂ 1,970 ರೂ. ನಗದನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

29/06/2022 10:39 am

Cinque Terre

19.51 K

Cinque Terre

2