ಉಪ್ಪಿನಂಗಡಿ: ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಕರಾಯ ಗ್ರಾಮದ ಮುನಾಸೀರ್ ಎಂದು ಗುರುತಿಸಲಾಗಿದೆ. ಮುನಾಸೀರ್ ಅಪ್ರಾಪ್ತೆಯ ನೆರೆಮನೆಯವನಾಗಿದ್ದು, ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಮೇ 30ರಂದು ಬಾಲಕಿ ಮನೆಯಿಂದ ಶಾಲೆಗೆ ಹೋಗುವಾಗ ಮುನಾಸಿರ್ ಕಾರಿನಲ್ಲಿ ಶಾಲೆಗೆ ಬಿಡುತ್ತೇನೆ ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೇ ಉಪ್ಪಿನಂಗಡಿ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಇದಲ್ಲದೆ ಮಂಗಳವಾರ ಕೂಡ ಬೆಳಿಗ್ಗೆ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಬಲವಂತವಾಗಿ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಲಾಡ್ಜ್ನಿಂದ ಕರೆದುಕೊಂಡು ಬಂದು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
Kshetra Samachara
08/06/2022 08:34 am