ಬಂಟ್ವಾಳ : ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಸಿ.ರೋಡಿನ ಬಿ.ಮೂಡ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ರಿಕ್ರಿಯೇಶನ್ ಕ್ಲಬ್ ಒಂದಕ್ಕೆ ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಪೇಟೆಯ ಮಧ್ಯೆಯೇ ಈ ರಿಕ್ರಿಯೇಶನ್ ಕ್ಲಬ್ ಕಾರ್ಯಾಚರಿಸುತ್ತಿದ್ದು, ಹಾಡಹಗಲೇ ದಾಳಿ ನಡೆಸಿದ ವಿಚಾರ ಸುತ್ತಮುತ್ತಲಿನ ಪ್ರದೇಶಕ್ಕೆಲ್ಲ ಹಬ್ಬಿ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ ಘಟನೆಯೂ ನಡೆಯಿತು. ಸುಮಾರು 28 ಮಂದಿಯನ್ನು ಪೊಲೀಸರು ಈ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದು, ಜೂಜಾಟಕ್ಕೆ ಬಳಸಿದ 26,900 ರೂ ಹಣ, ಟೇಬಲ್, ಆರು ಕುರ್ಚಿ, 52 ಇಸ್ಪೀಟ್ ಹಾಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/06/2022 10:13 pm