ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಿಷೇಧಿತ ಮಾದಕದ್ರವ್ಯ ಸಾಗಾಟದ ಆರೋಪಿ ವಶಕ್ಕೆ

ಮಂಗಳೂರು: ನಿಷೇಧಿತ ಮಾದಕದ್ರವ್ಯ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಮಳವೂರು ಗ್ರಾಮದ ಕರಂಬಾರು ನಿವಾಸಿ ಗೋಪಾಲಕೃಷ್ಣ ಅಲಿಯಾಸ್ ಗೋಪಾಲ(45) ಬಂಧಿತ ಆರೋಪಿ.

ಬಜ್ಪೆ ಠಾಣಾ ಪೊಲೀಸರು ಇಂದು ಮಧ್ಯಾಹ್ನ 2.30 ಸುಮಾರಿಗೆ ಕರಂಬಾರು ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ಕೂಟರ್ ಒಂದನ್ನು ನಿಲ್ಲಿಸಿದ್ದಾರೆ. ಆದರೆ ಸ್ಕೂಟರ್ ನಿಲ್ಲಿಸದೆ ವೇಗವಾಗಿ ಸವಾರ ಚಲಾಯಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ಸ್ಕೂಟರ್ ನಲ್ಲಿ ನಿಷೇಧಿತ ಮಾದಕದ್ರವ್ಯ ಎಂಡಿಎಂಎ ಪತ್ತೆಯಾಗಿದೆ.

ತಕ್ಷಣ ಪೊಲೀಸರು ಆರೋಪಿ ಗೋಪಾಲಕೃಷ್ಣನನ್ನು ಬಂಧಿಸಿ 1.50 ಗ್ರಾಂ ತೂಕದ 7,500 ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಸಹಿತ ಸ್ಕೂಟರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

26/05/2022 07:01 pm

Cinque Terre

11.82 K

Cinque Terre

0