ಸುಳ್ಯ : ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯ ಪ್ಯಾಕೆಟ್ ಗಳು ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಗ್ರಾ.ಪಂ. ಪಿಡಿಒ ಶ್ಯಾಮ್ ಪ್ರಸಾದ್ ಅವರು ತ್ಯಾಜ್ಯ ಎಸೆದ ಬಗ್ಗೆ ಪರಿಶೀಲಿಸುವ ವೇಳೆ ಹಾಲಿನ ಪುಡಿ ಪ್ಯಾಕೆಟ್ ಗಳು ರಸ್ತೆ ಬದಿ ಎಸೆದಿರುವುದು ಕಂಡುಬಂದಿದೆ. ಹಾಲಿನ ಪುಡಿ ಪ್ಯಾಕೆಟ್ ನಿಂದ ಹೊರಚೆಲ್ಲಿದ ರೀತಿಯಲ್ಲಿದ್ದು,ಸರ್ಕಾರದಿಂದ ಉಚಿತವಾಗಿ ಮಕ್ಕಳಿಗೆ ಪೊರೈಕೆಯಾಗಿರುವ ಹಾಲಿನ ಪುಡಿ ಪ್ಯಾಕೆಟ್ ಗಳು ಇಲ್ಲಿಗೆ ಹೇಗೆ ಬಂದಿವೆ ಎಂಬ ಬಗ್ಗೆ ತಿಳಿದಿಲ್ಲ. ಬೇಂಗಮಲೆ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಹಲವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯವನ್ನು ಐವರ್ನಾಡು ಗ್ರಾ.ಪಂ. ವತಿಯಿಂದ ಮಾಡಲಾಗುತ್ತಿದ್ದರೂ ತ್ಯಾಜ್ಯ ಎಸೆಯುವವರು ತಮ್ಮ ಕೃತ್ಯವನ್ನು ಮುಂದುವರಿಸುತ್ತಿದ್ದು, ಇದು ಗ್ರಾ.ಪಂ.ಗೆ ತಲೆನೋವಾಗಿ ಪರಿಣಮಿಸಿದೆ.
Kshetra Samachara
18/05/2022 11:12 pm