ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಯುವತಿ ನೇಣಿಗೆ ಶರಣು- ಕಾರಣ ನಿಗೂಢ!

ಸುಳ್ಯ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿ ಯುವತಿಯೋರ್ವರ ಮೃತದೇಹ ಸುಳ್ಯದ ಗಾಂಧಿನಗರದಲ್ಲಿ ಪತ್ತೆಯಾಗಿದೆ.

ಸುಳ್ಯತಾಲೂಕಿನ ಗಾಂಧಿನಗರದ ಕೆರೆಮೂಲೆಯ ಬಾಡಿಗೆ ನಿವಾಸಿ‌ ಆಯಿಶಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಯಿಶಾಗೆ ಕಾಸರಗೋಡು ಜಿಲ್ಲೆಯ ಮಂಙಪಾರೆ ಮೂಲದ ಯುವಕನೊಂದಿಗೆ ವಿವಾಹವಾಗಿದ್ದು, ಪತಿ ವಿದೇಶದಲ್ಲಿದ್ದರು.

ಆಯಿಶಾ ತವರು ಮನೆಯಲ್ಲಿದ್ದು, ತಮ್ಮ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್ ಆಕೆ ಬದುಕಿ ಉಳಿದಿಲ್ಲ.ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

07/05/2022 10:35 pm

Cinque Terre

17.25 K

Cinque Terre

0

ಸಂಬಂಧಿತ ಸುದ್ದಿ