ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಎಸ್‌ಎಸ್‌ಎಲ್‌ಸಿ ಬಾಲಕಿ ಆತ್ಮಹತ್ಯೆ ಕೇಸ್‌: ಆರೋಪಿ ಸಾಹುಲ್ ಹಮೀದ್ ಅರೆಸ್ಟ್

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದ ಬಾಲಕಿ ಆತ್ಮಹತ್ಯೆ ಪ್ರಕರಣ ಈಗ ಲವ್ ಜಿಹಾದ್ ಬಣ್ಣ ಪಡೆದಿದೆ. ಸದ್ಯ ಈ ಪ್ರಕರಣದ ಆರೋಪಿ ಸಾಹುಲ್ ಹಮೀದ್‌ನನ್ನು ವಿಟ್ಲ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಹುಲ್ ಹಮೀದ್‌ನನ್ನು ಬಂಧಿಸಿದ ಪೊಲೀಸ್ ತಂಡವು ವಿಚಾರಣೆಗೆ ಕರೆ ತರುತ್ತಿದೆ. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು.

ಮೇ 4ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಅನ್ಯಧರ್ಮದ ಯುವಕ ನೀಡಿದ ಪ್ರಚೋದನೆಯೇ ಕಾರಣ ಎಂದು ಮನೆಯವರು ಆರೋಪಿಸಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಬಾಲಕಿ ಮನೆಯವರಯ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

06/05/2022 04:13 pm

Cinque Terre

14.26 K

Cinque Terre

2