ವಿಟ್ಲ: ದೇಶಾದ್ಯಂತ ಲವ್ ಜಿಹಾದ್ ವಿಚಾರದ ಕುರಿತಂತೆ ಭಾರೀ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಾಲಕಿಯೋರ್ವಳು ಲವ್ ಜಿಹಾದ್ ಗೆ ಸಿಲುಕಿ ಆತ್ಮಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿಯೂರಿನಲ್ಲಿ ಮೇ 4 ರಂದು ಘಟನೆ ನಡೆದಿದೆ.
ದಲಿತ ಸಮುದಾಯಕ್ಕೆ ಸೇರಿದ ಸಂಜೀವ- ಗೀತಾ ದಂಪತಿ ಪುತ್ರಿ 14ರ ಹರೆಯದ ಬಾಲಕಿ ಅನ್ಯಕೋಮಿನ ಯುವಕನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಮೂಲತ: ಸುಳ್ಯ ತಾಲೂಕಿನ ಪಂಜದ ಈ ದಂಪತಿ ಕಣಿಯೂರು ಮಸೀದಿ ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಈ ಮಧ್ಯೆ ಕಣಿಯೂರು ನಿವಾಸಿ ಶಾಹುಲ್ ಹಮೀದ್, ಬಾಲಕಿಯ ತಂದೆ ಸಂಜೀವರ ಜೊತೆ ಕೂಲಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆ ಕಡೆ ಬರುತ್ತಿದ್ದ. ಹೀಗೆ ಬಂದವ 9ನೇ ತರಗತಿ ವಿದ್ಯಾರ್ಥಿನಿ ಆತ್ಮಿಕಾ ಜೊತೆ ಪರಿಚಯಿಸಿದ್ದಾನೆ.
30ರ ಹರೆಯದ ಶಾಹುಲ್ ಹಮೀದ್ ಬಾಲಕಿಯನ್ನು ಕಾಮುಕ ದೃಷ್ಟಿಯಿಂದಲೇ ನೋಡುತ್ತಿದ್ದು, ಕೂಲಿ ಕೆಲಸಕ್ಕಾಗಿ ಆತ್ಮಿಕಾಳ ಪೋಷಕರು ತೆರಳಿದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಆತ್ಮಿಕಾಳನ್ನು ಕಾಣಲು ಬರುತ್ತಿದ್ದ ಎಂಬ ಮಾಹಿತಿ ಪೋಷಕರಿಗೆ ತಿಳಿದ ಬಳಿಕ ಸಾಹುಲ್ ಗೆ ಪೋಷಕರು ಎಚ್ಚರಿಕೆ ನೀಡಿ, ಬುದ್ಧಿಮಾತನ್ನೂ ಹೇಳಿದ್ದಾರೆ.
ಆದರೆ, ಬಾಲಕಿಯ ಮುಗ್ಧತೆ ಮಿಸ್ ಯೂಸ್ ಮಾಡಿಕೊಂಡ ಶಾಹುಲ್ , ಆಕೆಯನ್ನು ಫೋನ್ ಮೂಲಕ ಸಂಪರ್ಕಿಸುವ ಕೆಲಸ ನಿರಂತರ ಮಾಡುತ್ತಿದ್ದ. ಈ ನಡುವೆ 9ನೇ ತರಗತಿ ಪರೀಕ್ಷೆ ಕಳೆದು ಮನೆಯಲ್ಲೇ ಇದ್ದ ಆತ್ಮಿಕಾಳನ್ನು ನೋಡಲು ಬರುತ್ತಿದ್ದ ಶಾಹುಲ್ ಹಮೀದ್, ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸುತ್ತಿದ್ದ. ಅಲ್ಲದೆ, ಆಕೆಯ ತಲೆ ಕೂದಲನ್ನು ಕೊಂಡೊಯ್ದು, ಬಳಿಕ ಭಸ್ಮ ಮಾದರಿಯ ವಸ್ತು ತಿನ್ನಲು ನೀಡಿದ್ದ ಎಂಬ ವಿಚಾರವನ್ನು ಸ್ವತ: ಆತ್ಮಿಕಾ, ತಾಯಿ ಗೀತಾ ಅವರ ಬಳಿ ತಿಳಿಸಿದ್ದಾಳಂತೆ!
Kshetra Samachara
05/05/2022 10:31 pm