ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: 10 ರೂ ರಿಚಾರ್ಜ್ ಮಾಡಲು ಹೇಳಿ 1.65 ಲಕ್ಷ ರೂ ಗುಳುಂ: ಬಿ.ಸಿ ರೋಡ್ ವೈದ್ಯರಿಗೆ ಮೋಸ

ಬಂಟ್ವಾಳ: ನಿಮ್ಮ ನಂಬರ್ ಅಪ್ಡೇಟ್ ಮಾಡುತ್ತೇನೆ ಎಂದು ಹೇಳಿ, 10 ರೂ ರೀಚಾರ್ಜ್ ಮಾಡಲು ತಿಳಿಸಿ 1.65 ಲಕ್ಷ ರೂವನ್ನು ತನ್ನ ಖಾತೆಗೆ ಅಪರಿಚಿತ ಅನಾಮಧೇಯನೊಬ್ಬ ವರ್ಗಾವಣೆ ಮಾಡಿದ ಪ್ರಕರಣವೊಂದು ನಡೆದಿದೆ. ಈ ಕುರಿತು ಮಂಗಳವಾರ ಪ್ರಕರಣ ದಾಖಲಾಗಿದೆ.

ಈ ಕುರಿತು ಬಿ.ಸಿ.ರೋಡಿನ ವೈದ್ಯ ಡಾ. ಅಶ್ವಿನ್ ಬಾಳಿಗಾ ದೂರು ನೀಡಿದ್ದು, ಅವರ ಮೊಬೈಲ್ ಗೆ ಏ.29ರಂದು ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್‌ಅನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್‌ನಿಂದ ಕ್ವಿಕ್ ಈಸಿ ಆಪ್ ಅನ್ನು ಡೌನ್ಲೋಡ್ ಮಾಡಿಸಿ ನಂತರ ವೈದ್ಯರ ಮೊಬೈಲ್ ನಲ್ಲಿ ಮೈ ಜಿಯೋ ಆಪ್ ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದ್ದಾನೆ. ಅದರಂತೆ ವೈದ್ಯರು ತನ್ನ ಬ್ಯಾಂಕ್ ಎಸ್ಬಿ ಖಾತೆ ಡೆಬಿಟ್ ಕಾರ್ಡ್ ವಿವರಗಳನು ಆಪ್‌ನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿರುತ್ತಾರೆ ಕೂಡಲೇ ತನ್ನ್ ಖಾತೆಯಿಂದ 10,000ದಂತೆ 3 ಬಾರಿ ಮತ್ತು ರೂ 45,000ದಂತೆ 3 ಬಾರಿ ಅಪರಿಚಿತನ ಖಾತೆಗೆ ಒಟ್ಟು ರೂ 1,65,000 ಹಣ ವರ್ಗಾವಣೆಯಾಗಿರುತ್ತದೆ. ಈ ರೀತಿಯಾಗಿ ಹಣವನ್ನು ಪಡೆದುಕೊಂಡು ವಂಚಿಸಿ ಮೋಸ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

03/05/2022 04:43 pm

Cinque Terre

11.92 K

Cinque Terre

2