ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ : ಗುಂಡ್ಯಹೊಳೆಯಲ್ಲಿ ಮೀನುಗಳ ಮಾರಣ ಹೋಮ !

ಉದನೆ : ಉದನೆ ತೂಗುಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದಿರುವುದು ಏ.27 ರಂದು ಬೆಳಿಗ್ಗೆ ಕಂಡು ಬಂದಿದೆ. ಇದು ಯಾರೋ ಮೀನು ಹಿಡಿಯುವವರು ತೋಟೆ ಸಿಡಿಸಿರುವುದರಿಂದ ಇಲ್ಲವೇ ವಿಷ ಪದಾರ್ಥ ಹಾಕಿರುವುದರಿಂದಲೇ ಮೀನುಗಳು ಸತ್ತು ಹೋಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉದನೆ ತೂಗುಸೇತುವೆ ಸಮೀಪ ದೊಡ್ಡ ಕಯ ಇದ್ದು ಜನರು ಇಲ್ಲಿಗೆ ಹರಕೆ ರೂಪದಲ್ಲಿ ದನದ ಹಾಲು ತಂದು ಹಾಕುತ್ತಾರೆ. ಇಲ್ಲಿ ಉರುವೋಲು ಜಾತಿಯ ದೊಡ್ಡ ದೊಡ್ಡ ನೂರಾರು ಮೀನುಗಳು ಇವೆ. ಈ ಜಾಗ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು ಮೀನು ಹಿಡಿಯುವುದನ್ನು ನಿಷೇಧಿಸಿ ನಾಮ ಫಲಕವೂ ಹಾಕಲಾಗಿದೆ. ಆದರೂ ಇಲ್ಲಿ ತೋಟೆ ಹಾಕಿ ಮೀನು ಹಿಡಿಯಲು ಯಾರೋ ಮುಂದಾಗಿದ್ದು ಇದರಿಂದಲೇ ನೂರಾರು ಮೀನುಗಳು ಸತ್ತು ಬಿದ್ದಿವೆ ಎಂದು ಹೇಳಲಾಗಿದೆ. ಕೆಲವೊಂದು ಮೀನು ಹೊಳೆ ಬದಿ ದಡದಲ್ಲಿ ಸತ್ತು ಬಿದ್ದಿದ್ದು ಇನ್ನು ಕೆಲವು ನದಿಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ.

ದೂರು:

ಗುಂಡ್ಯ ಹೊಳೆಯಲ್ಲಿ ಮೀನುಗಳು ಸತ್ತಿರುವ ಬಗ್ಗೆ ಕೊಣಾಜೆ ಗಸ್ತು ಅರಣ್ಯ ರಕ್ಷಕ ಶೀನಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಕೆಲಸಕ್ಕೆಂದು ಬಂದಿದ್ದ ಆಂಧ್ರ ಮೂಲದ ಮೂವರನ್ನು ಕಳಪ್ಪಾರು ಎಂಬಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

28/04/2022 08:58 am

Cinque Terre

12.75 K

Cinque Terre

0