ಮೈಸೂರು: ಸುಳ್ಯದ ಕುಕ್ಕಾಜೆಕಾನದ ಮೂಲದವರಾದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಧವ್ ನಾಯ್ಕ್(56) ಹಾಗೂ ಪತ್ನಿ ಉಷಾ (47) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆತ್ಮಹತ್ಯೆ ನಡೆದ ಸ್ಥಳ ಮಹಜರು ಮಾಡಿದ್ದಾರೆ. ನಿನ್ನೆ ರವಿವಾರ ರಾತ್ರಿ ಸುಳ್ಯ ಕುಕ್ಕಾಜೆಕಾನದಲ್ಲಿ ಮೃತ ದಂಪತಿಯ ಅಂತ್ಯಕ್ರಿಯೆ ನಡೆದಿದೆ.
ಮಾಧವ್ ನಾಯ್ಕ್ ಅವರು ಮೂರ್ನಾಲ್ಕು ವರ್ಷಗಳ ಹಿಂದೆ ಪೋಸ್ಟ್ ಮ್ಯಾನ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ನೆಲೆಸಿದ್ದರು. ಮೃತ ದಂಪತಿ ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
Kshetra Samachara
18/04/2022 02:38 pm