ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಗುತ್ತಿಗೆದಾರ ಸಂತೋಷ್ ಗೆಳೆಯರು ಪೊಲೀಸ್ ವಶದಲ್ಲಿ

ಉಡುಪಿ: ಕಳೆದೆರಡು ದಿನಗಳಿಂದ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ,ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆಳೆಯರು ಸದ್ಯ ಪೊಲೀಸ್ ವಶದಲ್ಲಿದ್ದಾರೆ.

ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ರೂಂ.ನಂಬರ್ 207 ರಲ್ಲಿದ್ದರೆ ಅದೇ ಲಾಡ್ಜ್ ನ್ ರೂಂ.ನಂ 208 ರಲ್ಲಿ ಸಂತೋಷ್ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಮತ್ತು ಸಂತೋಷ್ ಮೇದಪ್ಪ ತಂಗಿದ್ದರು.

ಸೋಮವಾರ ರಾತ್ರಿ ಗುಡ್ ನೈಟ್ ಹೇಳಿ ಮಲಗಿದ್ದ ಸಂತೋಷ್ ಮರುದಿನ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಘಟನೆ ನಡೆದ ಕ್ಷಣದಿಂದ ಸಂತೋಷ್ ಸ್ನೇಹಿತರು ಪೊಲೀಸರ ವಶದಲ್ಲಿದ್ದಾರೆ.

ಓರ್ವ ಬೆಂಗಳೂರು ಮತ್ತೋರ್ವ ಕೊಡಗು ಮೂಲದ ಸ್ನೇಹಿತರ ಬಳಿ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಇಬ್ಬರಿಂದ ವಿವರವಾದ ಸ್ಟೇಟ್ ಮೆಂಟ್ ಕೂಡ ಪಡೆದುಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ" ನಿಗೂಡ"ವಾಗಿದ್ದ ಸ್ನೇಹಿತರು ,ಎಲ್ಲೂ ಮಾಧ್ಯಮದ ಕಣ್ಣಿಗೆ ಬೀದಿರಲಿಲ್ಲ. ಆದರೆ ಮೃತ ಸಂತೋಷ್ ಕಾರನ್ನು ಮಹಜರು ಮಾಡುವಾಗ ಆತನ ಇಬ್ಬರು ಸ್ನೇಹಿತರು ಸಾರ್ವಜನಿಕವಾಗಿ ಕೆಲ ಹೊತ್ತು ಕಾಣಿಸಿಕೊಂಡರು.

ಪೊಲೀಸ್ ಉನ್ನತ ಮೂಲಗಳ ಪ್ರಕಾರ ಇವರಿಬ್ಬರುಮುಗ್ಧರಾಗಿದ್ದು ,ಸಂತೋಷ್ ಜೊತೆ ಚೆನ್ನಾಗಿಯೇ ಇದ್ದರು.

ಸದ್ಯ ಪೊಲೀಸ್ ವಶದಲ್ಲಿರುವ ಈ ಇಬ್ಬರು ಸ್ನೇಹಿತರನ್ನು ಪೊಲೀಸರು ಇಂದು ಅಥವಾ ನಾಳೆ ವಶದಿಂದ ಮುಕ್ತಗೊಳಿಸಬಹುದು ಎನ್ನಲಾಗುತ್ತಿದೆ.

Edited By : Shivu K
PublicNext

PublicNext

14/04/2022 01:40 pm

Cinque Terre

41.74 K

Cinque Terre

3

ಸಂಬಂಧಿತ ಸುದ್ದಿ