ಬ್ರಹ್ಮಾವರ: ತಾಲೂಕಿನ ಹೇರೂರು ಕಾಡೋಳಿ ಕ್ರಾಸ್ ಸಮೀಪ ಕಾರ್ಯಾಚರಣೆ ನಡೆಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗೋವುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಥಾಮಸ್ ಡಿ ಸೋಜ ಎಂಬುವರಿಗೆ ಅಕ್ರಮವಾಗಿ ಮಾಂಸ ಮಾಡಲು ಗೋವುಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ವೇಳೆ ಸಾಲಿಗ್ರಾಮ ಕಾರ್ಕಡ ಪಡುಬೈಲ್‌ನ ಕೃಷ್ಣ ಪೂಜಾರಿ ಹಾಗೂ ಕಾವಡಿಯ ನಾಗೇಶ ಮರಕಾಲನನ್ನು ಬ್ರಹ್ಮಾವರ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಬ್ರಹ್ಮಾವರ ಪೋಲಿಸರಿಗೆ ಒಪ್ಪಿಸಿದ್ದಾರೆ. ಏಳು ಗೋವುಗಳನ್ನು ರಕ್ಷಿಸಲಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
PublicNext
13/04/2022 12:28 pm