ಉಡುಪಿ: ಉಡುಪಿಯ ಶಾಂಭವಿ ಲಾಡ್ಜ್ ಗೆ ಕೆಎಂಸಿ FSL ತಂಡ ಬೆಳಿಗ್ಗೆ ಆಗಮಿಸಿದೆ.ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ FSL ತಂಡವನ್ನು ಉಡುಪಿ ಪೊಲೀಸರು ಕರೆಸಿಕೊಂಡಿದ್ದಾರೆ.ಮಂಗಳೂರಿನಿಂದ ಇನ್ನೊಂದು ತಂಡವೂ ಆಗಮಿಸಲಿದೆ.ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆ ಕ್ರಮವಾಗಿ ಎರಡು ತಂಡಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಮತ್ತು ಸರಕಾರಿ ಎರಡು ತಂಡಗಳಿಂದ ಪರಿಶೀಲನೆ ನಡೆಸಿ,ಬಳಿಕ ಪಂಚನಾಮೆ ಪ್ರಕ್ರಿಯೆ ನಡೆಯಲಿದೆ.ನಂತರವಷ್ಟೇ ಸಂತೋಷ್ ಪಾಟೀಲ್ ಶವದ ಮರಣೋತ್ತರ ಪರೀಕ್ಷೆ ನಡೆಯಲಿದೆ.ಇವತ್ತು ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಿದ್ದಾರೆ.ಘಟನೆ ನಡೆದ ಶಾಂಭವಿ ಲಾಡ್ಜ್ ನ ಸುತ್ತ ಮುತ್ತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
PublicNext
13/04/2022 10:00 am