ಕುಂದಾಪುರ: ಪಿಯುಸಿ ವಿದ್ಯಾರ್ಥಿಗಳಿಬ್ಬರು ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಠಾಣೆ ವ್ಯಾಪ್ತಿಯ ಮಚ್ಚಟ್ಟು ಹೊಳೆಯಲ್ಲಿ ಇಂದು ಸಂಭವಿಸಿದೆ.
ಉಳ್ಳೂರು-74 ನಿವಾಸಿಗಳಾದ ಸುಮಂತ ಮಡಿವಾಳ (18), ಗಣೇಶ್ (18) ಮೃತ ವಿದ್ಯಾರ್ಥಿಗಳಾಗಿದ್ದಾರೆ.
ಶಂಕರನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದ ಸುಮಂತ್ ಹಾಗೂ ಗಣೇಶ್, ಇಂದು ಮಧ್ಯಾಹ್ನದ ವೇಳೆಗೆ ಸ್ನಾನಕ್ಕೆಂದು ನೀರಿಗಿಳಿದಾಗ ಸೆಳೆತಕ್ಕೆ ಒಳಗಾಗಿ ಕೊಚ್ಚಿಕೊಂಡು ಹೋಗಿದ್ದಾರೆನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Kshetra Samachara
31/03/2022 07:28 pm