ಬಜಪೆ: ಕೈಕಂಬ ಸಮೀಪದ ಕಂದಾವರ ಪದವು ಶ್ರೀ ಕೊರ್ದಬ್ಬು ದೈವಸ್ಥಾನದ ಅಂಗಣದಲ್ಲಿ ನಿನ್ನೆ ಬೆಳಿಗ್ಗೆ ರಕ್ತದ ಕಲೆಗಳು ಕಂಡುಬಂದಿದ್ದವು. ದೈವಸ್ಥಾನದ ಅಪವಿತ್ರ ಗೊಳಿಸಿದ ಬಗ್ಗೆ ಭಕ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ, ದೈವಸ್ಥಾನದಲ್ಲಿ ಆಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲನೆಯನ್ನು ನಡೆಸಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿ ಸಾಹುಲ್ ಎಂಬಾತನನ್ನು ಪೊಲೀಸರು ಆತನ ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ವಶದಲ್ಲಿರುವ ವ್ಯಕ್ತಿಯು ಮಾನಸಿಕ ಅಸ್ವಸ್ಥ ಹಾಗೂ ಮಾದಕ ವ್ಯಸನಿ ಕೂಡ ಆಗಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಸಮಿತಿಯಿಂದ ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿಕೊಂಡ ಬಜಪೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂದೇಶ್ ಪಿ.ಜಿ ರವರ ತಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ನೀಡಿದ್ದ ಒಂದು ಗಂಟೆಯೊಳಗೆ ಆರೋಪಿಯ ಜಾಡು ಹಿಡಿದು ಆರೋಪಿಯನ್ನು ಪತ್ತೆಮಾಡಿದ್ದಾರೆ.
Kshetra Samachara
22/03/2022 02:27 pm