ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಿಷೇಧಿತ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ಏಳು ಮಂದಿ ಪೊಲೀಸರ ವಶಕ್ಕೆ!

ಪಡುಬಿದ್ರೆ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಸಮುದ್ರತೀರದಲ್ಲಿ ನಿಷೇಧಿತ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಅನ್ಯರಾಜ್ಯದ ಮೀನುಗಾರರು ಸದ್ಯ ಪೊಲೀಸರ ವಶದಲ್ಲಿದ್ದಾರೆ. ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಮೀನು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮೀನುಗಾರರು ಅವರನ್ನು ಉಚ್ಚಿಲದ ಸುಭಾಷ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದಿದ್ದರು. ಬಳಿಕ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ನೀಡಿದ್ದಾರೆ.

ಸದ್ಯ ಅವರು ಮೀನು ಹಿಡಿಯಲು ಬಳಸುತ್ತಿದ್ದ ದೋಣಿಯನ್ನು ಕೂಡ ದಂಡೆಗೆ ತಂದು ನಿಲ್ಲಿಸಲಾಗಿದೆ.

ಕರ್ನಾಟಕ ಕರಾವಳಿ ಪರಿಸರದಲ್ಲಿ ಬಂಡೆಗೆ ಅಂಟಿಕೊಂಡಿರುವ ಈ ಜಾತಿಯ ಮೀನನ್ನು ಹಿಡಿಯುವುದು ನಿಷೇಧಿಸಲಾಗಿದೆ. ಬಂಡೆಗೆ ಆಂಟಿಕೊಂಡಿರುವ ಪಚ್ಚಿಲೆ ಮೀನನ್ನು ತಿನ್ನಲು ನಾನಾ ಜಾತಿಯ ಮೀನುಗಳು ತೀರ ಪ್ರದೇಶಕ್ಕೆ ಬರುತ್ತವೆ. ತೀರ ಪ್ರದೇಶಕ್ಕೆ ಬರುವ ಇಂತಹ ಮೀನುಗಳನ್ನು ಹಿಡಿದು ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆ ನಡೆಸುತ್ತಾರೆ. ಒಂದು ವೇಳೆ ಪಚ್ಚಿಲೆ ಮೀನನ್ನು ತೆರವುಗೊಳಿಸಿದರೆ ತೀರ ಪ್ರದೇಶಕ್ಕೆ ಬರುವ ಮೀನುಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ಸ್ಥಳೀಯ ಮೀನುಗಾರರು ಯಾರೂ ಪಚ್ಚಿಲೆ ಮೀನನ್ನು ತೆಗೆಯುವುದಿಲ್ಲ.

ಹೆಚ್ಚಾಗಿ ತಮಿಳುನಾಡು ಭಾಗದಿಂದ ಬರುವ ಮೀನುಗಾರರು ಇವುಗಳ ಅಕ್ರಮ ಮೀನುಗಾರಿಕೆ ನಡೆಸುತ್ತಾರೆ ಸ್ಥಳೀಯ ಭಾಷೆಯಲ್ಲಿ ಪಚ್ಚಿಲೆ ಅಜೀರ್ ಅಥವಾ ನೀಲಿಕಲ್ ಎಂದು ಕರೆಯಲಾಗುವ ಈ ಮೀನಿನ ವೈಜ್ಞಾನಿಕ ಹೆಸರು ಪರ್ನವಿಡೀಸ್..

ಒಂದು ಪುಟ್ಟ ಗೋಣಿಚೀಲ ಮೀನಿಗೆ ಸುಮಾರು 9 ರಿಂದ 10 ಸಾವಿರ ರೂಪಾಯಿ ಬೆಲೆ ಇರುತ್ತೆ. ಕೇರಳದಲ್ಲಿ ಈ ಮೀನು ಸುಮಾರು 15 ಸಾವಿರಕ್ಕೂ ಮಾರಾಟವಾಗುತ್ತದೆ ಸಂತತಿ ಉಳಿಸುವ ದೃಷ್ಟಿಯಿಂದ ಈ ಮೀನನ್ನು ಕರ್ನಾಟಕ ಕರಾವಳಿಯ ಮೀನುಗಾರರು ಉಳಿಸಿಕೊಂಡು ಬಂದಿದ್ದಾರೆ ಆದರೆ ತಮಿಳುನಾಡಿನ ಮೀನುಗಾರರು ಇದನ್ನು ಹಿಡಿದು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ವೈಲ್ಡ್ ಲೈಫ್ ಆಕ್ಟ್ ಪ್ರಕಾರ ಈ ಮೀನುಗಾರಿಕೆ ಮೀನನ್ನು ಹಿಡಿಯುವುದು ನಿಷೇಧಿಸಿಲ್ಲ. ಆದರೆ ಮೀನುಗಾರಿಕೆಯ ಹಿತದೃಷ್ಟಿಯಿಂದ ಇವುಗಳನ್ನು ರಕ್ಷಿಸಿಕೊಂಡು ಬರಲಾಗಿದೆ.

Edited By : Nagesh Gaonkar
Kshetra Samachara

Kshetra Samachara

18/03/2022 03:51 pm

Cinque Terre

14.39 K

Cinque Terre

1