ಉಡುಪಿ: ಮನೆಯಲ್ಲಿ ಒಂಟಿ ವೃದ್ಧೆ ಇದ್ದಾಗ ಮನೆಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ ಘಟನೆ 76 ಬಡಗಬೆಟ್ಟುವಿನಲ್ಲಿ ನಡೆದಿದೆ.
ಇಲ್ಲಿನ ನೋಯಲ್ ಪ್ರಶಾಂತ್ ಕರ್ಕಡ ಅವರು ಕರ್ತವ್ಯದ ಸಲುವಾಗಿ ತೆರಳಿದ್ದ ವೇಳೆ ಮನೆಯಲ್ಲಿ ವಯಸ್ಸಾದ ತಾಯಿ ಒಬ್ಬರೇ ಇದ್ದರು. ಈ ವೇಳೆ ಕಳ್ಳರು ಮನೆಗೆ ನುಗ್ಗಿ ತಾಯಿಗೆ ತಿಳಿಯದಂತೆ ಹಾಲ್‌ನಲ್ಲಿಟ್ಟಿದ್ದ ಎಚ್.ಪಿ.ಕಂಪೆನಿಯ ಲ್ಯಾಪ್‌ಟಾಪ್ ಮತ್ತು ನೋಕಿಯಾ ಕಂಪೆನಿಯ ಮೊಬೈಲ್ ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 52 ಸಾವಿರ ರೂ.ಆಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/02/2022 01:37 pm