ಮಲ್ಪೆ: ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿಯ ತಂದೆಯ ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಸಹೋದರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಪೆ ಪರಿಸರದ ದೀಪಕ್ ಕುಮಾರ್, ಮನೋಜ್, ಸನಿಲ್ ರಾಜ್ ಬಂಧಿತರ ಆರೋಪಿಗಳಾಗಿದ್ದಾರೆ. ಫೆ.21 ರಾತ್ರಿ ವಿದ್ಯಾರ್ಥಿನಿ ಶಿಫಾ ತಂದೆ ನಡೆಸುತಿದ್ದ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿ ಹಿಜಾಬ್ ಹೋರಾಟಗಾರ್ತಿಯ ಸಹೋದರನ ಮೇಲೆ ಹಲ್ಲೆ ನಡೆಸಿದ ಆರೋಪ ಇವರ ಮೇಲಿತ್ತು.
ಈ ಘಟನೆಯಲ್ಲಿ ಹೊಟೇಲಿನ ಕಿಟಕಿ ಗಾಜು ಪುಡಿಯಾಗಿತ್ತು.ಘಟನೆ ನಡೆದು 24 ತಾಸಿನೊಳಗೆ ಮಲ್ಪೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
23/02/2022 09:58 am