ಮಲ್ಪೆ: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಕೃತ್ಯದಲ್ಲಿ ಓರ್ವನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮಲ್ಪೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮಲ್ಪೆಯಲ್ಲಿರುವ ವಿದ್ಯಾರ್ಥಿನಿ ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾಳೆ.ಹಿಜಾಬ್ ಗಾಗಿ ಬೇಡಿಕೆ ಇರಿಸಿ ಸುದ್ದಿಯಾಗಿದ್ದ ಆರು ಜನ ವಿದ್ಯಾರ್ಥಿನಿಯ ಪೈಕಿ ಈಕೆ ಕೂಡ ಒಬ್ವಳು.ಮಲ್ಪೆಯಲ್ಲಿ ಈ ವಿದ್ಯಾರ್ಥಿ ನಿಯ ತಂದೆ ಹೈದರ್ ಅಲಿ
ಬಿಸ್ಮಿಲ್ಲಾ ಎಂಬ ಹೋಟೆಲು ನಡೆಸುತ್ತಿದ್ದಾರೆ.
ರಾತ್ರಿ ದುಷ್ಕರ್ಮಿಗಳು ಹೋಟೆಲಿಗೆ ಕಲ್ಲು ತೂರಾಟ ನಡೆಸಿ ಹೈದರಾಲಿಯವರ ಮಗ ಸೈಫ್(20) ಮೇಲೆ ಹಲ್ಲೆ ನಡೆಸಿದ್ದಾರೆ.ಈ ಪ್ರಕರಣದ ಹಿಂದೆ ಶಾಸಕ ರಘುಪತಿ ಭಟ್ ಕೈವಾಡ ಇರುವುದಾಗಿ ಕ್ಯಾಂಪಸ್ ಫ್ರಂಟ್ ಗಂಭೀರ ಆರೋಪ ಮಾಡಿದೆ.
PublicNext
22/02/2022 02:31 pm