ಸುಳ್ಯ: ತಾಲೂಕು ಗುತ್ತಿಗಾರು ಗ್ರಾಮದಲ್ಲಿ 13 ವರ್ಷ ಪ್ರಾಯದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆಬ್ರವರಿ 3 ರಂದು ಸುಳ್ಯದಲ್ಲಿ ನಡೆದಿದೆ.
ಗುತ್ತಿಗಾರಿನ ಪೂಜಾರಿಕೋಡಿ ಹರೀಶ್ ರವರ ಪುತ್ರಿ ನಿಹಾರಿಕಾ (13) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ.
ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಈಕೆ ಈ ಬಾರಿ ನವೋದಯ ಶಾಲೆಗೆ ಏಳನೇ ತರಗತಿಗೆ ಆಯ್ಕೆಯಾಗಿದ್ದಳು.
ಮನೆಯಲ್ಲಿದ್ದವರಿಗೆ ವಿಷಯ ಗೊತ್ತಾಗಿ ತಕ್ಷಣ ಹೋಗಿ ಹಗ್ಗದಿಂದ ಕೆಳಗಿಳಿಸಿ, ಗುತ್ತಿಗಾರಿಗೆ ಆಸ್ಪತ್ರೆಗೆ ಕರೆತಂದರು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಇಲ್ಲಿ ಬಂದು ತಲುಪಿದಾಗ ಆಕೆ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದರು.
Kshetra Samachara
03/02/2022 08:34 pm