ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕಾರಿನಲ್ಲಿ ಅಕ್ರಮ ಸಾಗಾಟದ 1.60 ಕ್ವಿಂಟಾಲ್ ಗೋಮಾಂಸ ಪತ್ತೆ; ನಾಲ್ವರು ಅರೆಸ್ಟ್

ಮಂಗಳೂರು: ಕಾರೊಂದರಲ್ಲಿ‌ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.60 ಕ್ವಿಂಟಾಲ್ ಗೋಮಾಂಸ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹುಸೇನ್(24), ಮಹಮ್ಮದ್ ಮುಜಾಂಬಿಲ್(25), ಮಹಮ್ಮದ್ ಅಮೀನ್(21), ಸೊಹೈಬ್ ಅಕ್ತರ್(22) ಪೊಲೀಸರು ಬಂಧಿಸಿದ ಆರೋಪಿಗಳು. ಕೇರಳ ರಾಜ್ಯದ ಕಾಸರಗೋಡಿನಿಂದ ಉಳ್ಳಾಲಕ್ಕೆ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಬಂದ್ಯೋಡಿನ ಮೊಹಮ್ಮದ್ ಎಂಬವರಿಂದ ದನ ಖರೀದಿಸಿ ಅವರ ಮನೆಯಲ್ಲೇ ದನ ಕಡಿದು ಮಾಂಸ ಸಾಗಾಟ ಮಾಡಲಾಗಿತ್ತು.

ಉಳ್ಳಾಲದ ಕೋಡಿ ಹಾಗೂ ಮುಕ್ಕಚ್ಚೇರಿಯಲ್ಲಿನ ಯು.ಸಿ.ಇಬ್ರಾಹೀಂ ಕೋಡಿ ಎಂಬವರ ಬೀಫ್ ಸ್ಟಾಲ್ ಗೆ ಇವರು ಈ ಗೋಮಾಂಸವನ್ನು ಮಾರಾಟ ಮಾಡಲಾಗಿತ್ತು. ಆರೋಪಿಗಳ ಈಕೋ ಕಾರ್‌ನಲ್ಲಿ ದನದ ಮಾಂಸ, ಮೂರು ದನದ ತಲೆಗಳು, ದನದ ಚರ್ಮ ಪತ್ತೆಯಾಗಿತ್ತು.

ಬಂಧಿತರಿಂದ ಪೊಲೀಸರು ಅಕ್ರಮ ಸಾಗಾಟದ ಗೋಮಾಂಸ ಸೇರಿ 3,10,000 ಲಕ್ಷ ರೂ. ಮೊತ್ತದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

03/02/2022 06:25 pm

Cinque Terre

13.62 K

Cinque Terre

15