ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ; ಸಾಲ ತೀರಿಸಲಾಗದ ನೋವು- ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು

ಶಿರ್ವ: ಸಾಲ ತೀರಿಸಲಾಗದ ನೋವಿನಿಂದ ರಿಕ್ಷಾ ಚಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶಿರ್ವ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುದರಂಗಡಿಯ ರಾಜೇಶ್ ದೇವಾಡಿಗ (53) ಆತ್ಮಹತ್ಯೆಗೆ ಶರಣಾದ ರಿಕ್ಷಾ ಚಾಲಕ. ಇವರು ಶಂಕರಪುದಲ್ಲಿ ತಮ್ಮ ಸಹೋದರನಿಗೆ ಸೇರಿದ ಕ್ಯಾಟರಿಂಗ್ ಶೆಡ್ ಮಾಡಿನ ಜಂತಿಗೆ ನೇಣು ಬಿಗಿದುಕೊಂಡು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜೇಶ್ ಮುದರಂಗಡಿಯಲ್ಲಿ ರಿಕ್ಷಾ ಚಾಲಕನಾಗಿದ್ದ ವೇಳೆ ಮನೆ ಕಟ್ಟಲು ಮತ್ತು ಇನ್ನಿತರ ಕೆಲಸಕ್ಕೆ ಕೈ ಸಾಲ ಮಾಡಿಕೊಂಡಿದ್ದರು. ಶಂಕರಪುರದಲ್ಲಿರುವ ತನ್ನ ತಾಯಿಗೆ ಸೇರಿದ ಜಾಗ ಪಾಲು ಆಗದೆ ಇರುವ ಬಗ್ಗೆ ನೊಂದುಕೊಂಡಿದ್ದು, ತಾನು ಮಾಡಿದ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

29/01/2022 11:01 am

Cinque Terre

7.89 K

Cinque Terre

0