ಮಂಗಳೂರು: ಹಣ ಡಬಲ್ ಮಾಡಿ ಕೊಡುವ ಭರವಸೆ ನೀಡಿದ ಟಿಕ್ ಟಾಕ್ ಸ್ಟಾರ್ ಒಬ್ಬಳ ವೀಡಿಯೊ ನೋಡಿ ಹಣ ಹೂಡಿಕೆ ಮಾಡಿದ ಯುವಕನೊಬ್ಬ ಮೋಸ ಹೋದ ಘಟನೆ ಮಂಗಳೂರಲ್ಲಿ ನಡೆದಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ಯುವಕ ದೂರು ನೀಡಿದ್ದಾರೆ.
ಸೋನು ಶ್ರೀನಿವಾಸ ಗೌಡ ಎಂಬ ಟಿಕ್ ಟಾಕ್ ಸ್ಟಾರ್ ಸೋಶಿಯಲ್ ಮೀಡಿಯಾ ಪ್ರೊಮೋಷನ್‌ನಲ್ಲಿ ಟ್ರೇಡರ್ ಸ್ಟೆಲ್ಲಾ ಕುರಿತು ವೀಡಿಯೊ ಮಾಡಿದ್ದಳು. ಇದನ್ನು ನೋಡಿದ ಮಂಗಳೂರಿನ ಯುವಕನೊಬ್ಬ ಹಣ ಹೂಡಿಕೆ ಮಾಡಿ ಇದೀಗ ಮೋಸ ಹೋಗಿದ್ದಾನೆ.
ತಾನು ಮೋಸ ಹೋಗಿರುವ ಕುರಿತು ಮಾತನಾಡಿದ ಯುವಕ, ಸೋನು ಶ್ರೀನಿವಾಸ ಗೌಡ ಟ್ರೇಡರ್ ಸ್ಟೆಲ್ಲಾ ಎಂಬ ಆಪ್ ಕುರಿತಾಗಿ ಮಾಡಿರುವ ವೀಡಿಯೊವನ್ನು ನಂಬಿ ನಾನು 10 ಸಾವಿರ ರೂ. ಕಳುಹಿಸಿದ್ದೇನೆ. ಆದರೆ, ಇದೀಗ ನನಗೆ ಮೋಸವಾಗಿದ್ದು, ಯಾರೂ ಹಣ ಹೂಡಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/01/2022 10:01 am