ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯ ಹನಿಟ್ರ್ಯಾಪ್!; ಜೋಡಿ ಪೊಲೀಸ್ ಬಲೆಗೆ

ಮಂಗಳೂರು: ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯೋರ್ವರಿಂದ ಬರೋಬ್ಬರಿ 49 ಲಕ್ಷ ರೂ. ದೋಚಿದ ಜೋಡಿಯೊಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಸ್ತುತ ಮಂಗಳೂರಿನ ಪದವಿನಂಗಡಿ ನಿವಾಸಿಗಳಾದ ಕೊಡಗು ಮೂಲದ ಭವ್ಯಾ(30), ಹಾಸನ ಮೂಲದ ಕುಮಾರ್ ಅಲಿಯಾಸ್ ರಾಜು ಬಂಧಿತ ಜೋಡಿ. ಆರೋಪಿಗಳು ತಾವಿಬ್ಬರೂ ದಂಪತಿಯೆಂದು ಜ್ಯೋತಿಷಿಯಲ್ಲಿ ಪರಿಚಯ ಮಾಡಿಕೊಂಡಿದ್ದರು. ಬಳಿಕ ತಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಿಲ್ಲ. ಆದ್ದರಿಂದ ತಮ್ಮ ಪದವಿನಂಗಡಿಯ ಮನೆಗೆ ಬಂದು ಪೂಜೆ ಮಾಡಬೇಕೆಂದು ಕರೆಸಿಕೊಂಡಿದ್ದಾರೆ. ಆ ಬಳಿಕ ಆರೋಪಿಗಳು ಜ್ಯೋತಿಷಿಯು, ಭವ್ಯಾ ಜೊತೆಗಿದ್ದ ವೀಡಿಯೊ, ಫೋಟೊ ಹಾಗೂ ಆಡಿಯೋಗಳನ್ನು ಇರಿಸಿಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲು‌ ಆರಂಭಿಸಿದ್ದಾರೆ. ಈ ಮೂಲಕ ತಾವು ಬೇಡಿಕೆಯಿರಿಸಿದಷ್ಟು ಹಣ ನೀಡಬೇಕು ಇಲ್ಲದಿದ್ದಲ್ಲಿ ಎಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿದ್ದಾರೆ‌.

ಅಲ್ಲದೆ ಮಾಧ್ಯಮದವರು, ಪೊಲೀಸರು, ಮಹಿಳಾ ಸಂಘಟನೆ ಹೆಸರು ಹೇಳಿಕೊಂಡು 15 ಲಕ್ಷ ನಗದು ಪಡೆದಿದ್ದಾರೆ. ಅದೇ ರೀತಿ 34 ಲಕ್ಷ ರೂ.ವನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಜ್ಯೋತಿಷಿಯು ಸಂಬಂಧಿಕರು, ಸ್ನೇಹಿತರಲ್ಲಿ ಸಾಲ ಪಡೆದು ಈ ಹಣವನ್ನು ಆರೋಪಿಗಳಿಗೆ ನೀಡಿದ್ದರು. ಆದರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಕೇಳಿ ಬರುತ್ತಲೇ ಇದ್ದರಿಂದ ಬೇಸತ್ತ ಜ್ಯೋತಿಷಿ ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

Edited By : Shivu K
Kshetra Samachara

Kshetra Samachara

22/01/2022 09:00 am

Cinque Terre

12.73 K

Cinque Terre

1

ಸಂಬಂಧಿತ ಸುದ್ದಿ