ಮಂಗಳೂರು: ಕೊಲೆ ಸಂಚು ರೂಪಿಸಿದ ಆರೋಪದಡಿಯಲ್ಲಿ ಬಂಧಿತರಾದ ಐವರಲ್ಲಿ ಪ್ರಸಾದ್ ಹಾಗೂ ಚೇತನ್ ಕೊಟ್ಟಾರಿ ನಿರಪರಾಧಿಗಳು. ವಿಚಾರಣೆ ನೆಪದಲ್ಲಿ ಕರೆದೊಯ್ದು ಪೊಲೀಸರು ಬಂಧಿಸಿದ್ದಾರೆ ಎಂದು ಇಬ್ಬರ ಕುಟುಂಬಸ್ಥರು ಆರೋಪಿಸಿ, ಅಳಲು ತೋಡಿಕೊಂಡಿದ್ದಾರೆ.
ಚೇತನ್ ಕೊಟ್ಟಾರಿ ಪತ್ನಿ ಭಾಗ್ಯಶ್ರೀ ಮಾತನಾಡಿ, "ಆರೋಪಿ ಎಂದು ಬಂಧಿಸಿದ ಚೇತನ್ ಕೊಟ್ಟಾರಿಗೂ ಪೊಲೀಸರು ಬಂಧಿಸಿದ ಪ್ರಕರಣಕ್ಕೂ ಯಾವುದೇ ಸಂಬಂಧವೇ ಇಲ್ಲ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ಅವರು ಸಮಾಜಕ್ಕೆ ಸಹಾಯ ಮಾಡುತ್ತಿದ್ದರು. ಮದುವೆಗೆ ಮುಂಚೆ ಹಿಂದೂ ಸಂಘಟನೆಗಳಲ್ಲಿ ಇದ್ದರು. ಆದರೆ, ಇಂತಹ ಚಟುವಟಿಕೆ ನಡೆಸಿಲ್ಲ. ಇದೀಗ ಜಮೀನು ಬ್ರೋಕರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಇದೀಗ ವಿಚಾರಣೆಗೆ ಅಂತ ಕರೆದೊಯ್ದು ಬಂಧಿಸಿದ್ದಾರೆ. ಈ ಬಗ್ಗೆ ನಾವು ನಂಬಿದ ದೈವ- ದೇವರಿಗೆ ಹರಕೆ ಹೇಳಿದ್ದೇವೆ" ಎಂದರು.
ಬಂಧಿತ ಪ್ರಸಾದ್ ಪತ್ನಿ ನಿಕ್ಷಿತಾ ಮಾತನಾಡಿ, "ನನ್ನ ಗಂಡ ಪ್ರತಿಯೊಬ್ಬರಿಗೆ ಉಪಕಾರ ಮಾಡುತ್ತಿದ್ದರು. ಅವರ ತಾಯಿ ಹಾಸಿಗೆ ಹಿಡಿದಿದ್ದಾರೆ. ನಮಗೆ ಆಧಾರ ಅಂತ ಇರುವುದು ಅವರೇ. ಯಾರಿಗೂ ಕಷ್ಟ ಅಂದರೆ ಅವರ ಬಳಿ ಇಲ್ಲದಿದ್ದರೂ ಉಪಕಾರ ಮಾಡುತ್ತಿದ್ದರು. ಯಾರದ್ದೋ ಮಾತು ಕೇಳಿ ಹೀಗೆ ಬಂಧಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ" ಎಂದು ಹೇಳಿದ್ದಾರೆ.
Kshetra Samachara
19/01/2022 04:21 pm