ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಇಬ್ಬರು ಕಳ್ಳತನ ಆರೋಪಿಗಳ ಬಂಧನ

ಬಜಪೆ:ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಜಪೆ ಪೊಲೀಸರು ಇಬ್ಬರು ಕಳ್ಳತನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನುಚಿಕ್ಕಮಗಳೂರು ತಾಲೂಕಿನ ದ್ವಾರನಾಳು ಬೈರಪುರ ನಿವಾಸಿ ನಾಗ ನಾಯ್ಕ್ ಯಾನೆ ನಾಗರಾಜ್ (55) ಹಾಗೂ ಹಾವೇರಿ ಜಿಲ್ಲೆಯ ಮಾರಣ ಬೀಡು ,ಹಾನಗಲ್ ತಾಲೂಕಿನ ಜನತಾ ಪ್ಲ್ಯಾಟ್ ನಿವಾಸಿ ಶರಣಬಸಪ್ಪ ದ್ಯಾಮಪ್ಪ ದೊಡ್ಡಮನಿ(19) ಎಂದುಗುರುತಿಸಲಾಗಿದೆ.ಬಂಧಿತರಿಂದ ನಗದುಹಣ,ಚಿನ್ನಾಭರಣ ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಸೊತ್ತು,ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳು ಎಡಪದವು ರಾಮ ಭಜನಾ ಮಂದಿರದ ಕಾಣೆಕೆ ಡಬ್ಬಿಕಳ್ಳತನ ಪ್ರಕರಣ ,ಬಜಪೆ ಸಮೀಪದ MSEZ ಕಾಲೋನಿಯ ಧೂಮಾವತಿ ಧಾಮದಲ್ಲಿರುವ ದಯಾನಂದ ಕೊಟ್ಯಾನ್ ರವರ ಮನೆ ಕಳ್ಳತನ , ಪೆರ್ಮುದೆಯ ಫೆರ್ನಾಂಡಿಸ್ ಕಂಪೌಂಡ್ ಎಂಬಲ್ಲಿರುವ ಶ್ರೀಮತಿ ಲೂಸಿ ಮರಿಯಾ ರವರ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಆರೋಪಿ ನಾಗರಾಜ್ ಎಂಬಾತನ ಮೇಲೆ ವಿವಿಧ ಠಾಣೆಯಲ್ಲಿ ಮನೆ ಕಳವು, ದೇವಸ್ಥಾನ ಕಳವು, ದರೋಡೆ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿತ್ತು.

ಪತ್ತೆಕಾರ್ಯದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ N ಶಶಿ ಕುಮಾರ್ IPS ರವರ ಮಾರ್ಗದರ್ಶನದಂತೆ, ಹರಿರಾಮ್ ಶಂಕರ್ DCP (ಕಾ&ಸು) ಮತ್ತು ದಿನೇಶ್ ಕುಮಾರ್ DCP (ಅ & ಸಂ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಎನ್ . ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ, ಸಿಬ್ಬಂದಿಯವರಾದ PSI ಪೂವಪ್ಪ, ರಾಘವೇಂದ್ರ ನಾಯ್ಕ್, ಶ್ರೀಮತಿ ಕಮಲ, ಪ್ರೊ PSI ಅರುಣ ಕುಮಾರ್, ಮಾರುತಿ ಪಿ, ರಾಮ ಪೂಜಾರಿ ಮೇರೆಮಜಲು, ಸಂತೋಷ ಡಿ.ಕೆ ಸುಳ್ಯ, ರಶೀದ ಶೇಖ್, ಸುಜನ್, ಸಿದ್ದಲಿಂಗಯ್ಯ ಹಿರೇಮಠ್, ರಾಜೇಶ್, ಹೊನ್ನಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮನೋಜ್ ರವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಏಳು ವರ್ಷಗಳ ಹಿಂದಿನ ಪ್ರಕರಣವನ್ನು ಪತ್ತೆಹಚ್ಚಿದ ಬಜಪೆ ಠಾಣಾ ಪೊಲೀಸ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

Edited By :
Kshetra Samachara

Kshetra Samachara

17/01/2022 08:12 pm

Cinque Terre

7.17 K

Cinque Terre

0