ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಗಾಂಧಿ ಮೈದಾನದ ಬಳಿ ಕಾರ್ಯಾಚರಿಸುತ್ತಿರುವ ಫ್ರೆಶ್ ಬಾಸ್ಕೆಟ್ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ವಸ್ತು ಕಳವು ಮಾಡಲು ಯತ್ನಿಸಿದ ಮಹಿಳೆಯನ್ನು ಅಂಗಡಿ ಮಾಲೀಕರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಇಂದು ರಾತ್ರಿ 8ರ ವೇಳೆಗೆ ಫ್ರೆಶ್ ಬಾಸ್ಕೆಟ್ ಮಳಿಗೆಗೆ ಬಂದ ಕೆರೆಕಾಡು ಮೂಲದ ಮಹಿಳೆ ಸುಜಾತಾ ಎಂಬಾಕೆ ಒಂದು ಬ್ಯಾಗ್ ನಲ್ಲಿ ಬಿಲ್ ಮಾಡಿ ಸುಮಾರು ವಸ್ತುಗಳನ್ನು ಖರೀದಿಸಿದ್ದಾಳೆ. ಬಳಿಕ ಇನ್ನೊಂದು ಬ್ಯಾಗ್ ನಲ್ಲಿ 2000 ರೂ. ಕ್ಕೂ ಮಿಕ್ಕಿ ವಸ್ತುಗಳನ್ನು ತುಂಬಿಸಿ ಅಂಗಡಿ ಮಾಲೀಕನನ್ನು ಯಾಮಾರಿಸಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾಳೆ.
ಕೂಡಲೇ ಅಂಗಡಿ ಮಾಲೀಕ ಮುಲ್ಕಿ ಠಾಣೆಗೆ ಬಗ್ಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೆಲ ದಿನಗಳಿಂದ ಮಹಿಳೆ ವಸ್ತು ಖರೀದಿಸಲು ಇದೇ ಮಳಿಗೆಗೆ ಬರುತ್ತಿದ್ದು, ಮತ್ತಷ್ಟು ಕಳ್ಳತನ ನಡೆದ ಬಗ್ಗೆ ಶಂಕೆಯನ್ನು ಮಳಿಗೆ ಮಾಲೀಕರು ವ್ಯಕ್ತಪಡಿಸಿದ್ದಾರೆ.ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಮಹಿಳೆ ಕಾರ್ನಾಡು ಚರ್ಚ್ ಬಳಿಯ ಟೈಲರ್ ಅಂಗಡಿಯಲ್ಲಿ ಈ ಹಿಂದೆ ಕೆಲಸಕ್ಕಿದ್ದು, ಇದೇ ಚಟುವಟಿಕೆ ನಡೆಸಿದ್ದರಿಂದ ಅಂಗಡಿ ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದರು.
Kshetra Samachara
16/01/2022 10:08 pm