ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಹೋಟೆಲಿಗೆ ಊಟ ಮಾಡಲು ಬಂದ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನ ಮಾಡಿದ ಬಗ್ಗೆ ಮುಲ್ಕಿ ಠಾಣೆಗೆ ದೂರು ನೀಡಲಾಗಿದೆ.
ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಕಕ್ವ ನಿವಾಸಿ ಕಿರಣ್ ಕೋಟ್ಯಾನ್ (52)ಎಂಬವರು ಕಾರ್ನಾಡು ಪೂನಂ ಹೋಟೆಲಿಗೆ ಗುರುವಾರ ರಾತ್ರಿ 9 ಗಂಟೆಗೆ ಊಟ ಮಾಡಲು ತೆರಳಿದ್ದು, ತಮ್ಮ ಮೊಬೈಲ್ ಟೇಬಲ್ ಲ್ಲಿ ಇಟ್ಟು ಊಟ ಮುಗಿಸಿ ಕೈತೊಳೆದು ಕ್ಯಾಶ್ ಕೌಂಟರಲ್ಲಿ ಬಿಲ್ ಸಂದಾಯ ಮಾಡಿ ಹೊರಗೆ ಬರುವ ಹೊತ್ತಿನಲ್ಲಿ ಮೊಬೈಲ್ ನೆನಪಾಗಿದ್ದು ವಾಪಸ್ ಬಂದು ಟೇಬಲ್ ನೋಡುವಾಗ ಮೊಬೈಲ್ ನಾಪತ್ತೆಯಾಗಿದೆ.
ನಿಮಿಷದಲ್ಲಿ ಸುಮಾರು 16 ಸಾವಿರ ರೂಪಾಯಿ ಬೆಲೆಬಾಳುವ ವಿವೊ ಕಂಪನಿಯ ಮೊಬೈಲ್ ನ್ನು ಕಳ್ಳರು ಎಗರಿಸಿದ್ದಾರೆ ಎಂದು ಕಿರಣ್ ಕೋಟ್ಯಾನ್ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಹೋಟೆಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ.
Kshetra Samachara
25/12/2021 08:13 pm