ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಂದರಿನಲ್ಲಿ ಉಲ್ಟಾ ನೇತು ಹಾಕಿ ಹಾಕಿ ಹಲ್ಲೆ ಪ್ರಕರಣ: 6 ಜನರ ಬಂಧನ

ಮಂಗಳೂರು: ಮೀನುಗಾರಿಕಾ ಬೋಟ್‌ನಲ್ಲಿ ಮೊಬೈಲ್ ಕದ್ದನೆಂದು ಆರೋಪಿಸಿ ಮಂಗಳೂರಿನ ಮೀನುಗಾರಿಕಾ ಬಂದರ್ ಧಕ್ಕೆ ಯಲ್ಲಿ ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವೋಟುಕೋರಿ ಜಾಲಯ್ಯ (30), ಕರಪಿಂಗಾರ ರವಿ (26), ಪ್ರಲಯ ಕಾವೇರಿ ಗೋವಿಂದಯ್ಯ (47) ಬಂಧಿತರು ಡಿ.15ರಂದು ಮಧ್ಯಾಹ್ನ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟ್ ನಲ್ಲಿ ಈ ಘಟನೆ ನಡೆದಿದ್ದು, ಆಂಧ್ರದ ವೈಲ ಶೀನು ಎಂಬವರು ದೌರ್ಜನ್ಯಕ್ಕೆ ಒಳಗಾದವರು. ಈ ಘಟನೆಯನ್ನು ಚಿತ್ರೀಕರಿಸಿ ಜಾಲತಾಣಗಲ್ಲಿ ಹರಿಯಬಿಡಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕಿ ಡಿ.21ರಂದು ಪ್ರಕರಣ ದಾಖಲಿಸಿದ್ದರು.

ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಗಳು ಪೊಲೀಸರ ಬಳಿ ತಪೊಪ್ಪಿಕೊಂಡಿದ್ದಾರೆ. ಕಾಲು ಕಟ್ಟಿ ಬೋಟ್ ಕಂಬಕ್ಕೆ ತೂಗು ಹಾಕಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆ ಕಟ್ಟಿ ಮರದ ರೀಪಿನಿಂದ ಹೊಡೆದು ಹಿಂಸೆ ನೀಡಿದ್ದಾರೆ. ಈ ಘಟನೆಯನ್ನು ನೋಡಿದ ಸ್ಥಳೀಯ ಸಾರ್ವಜನಿಕರು ವೈಲ ಶೀನನನ್ನು ಹಗ್ಗದಿಂದ ಇಳಿಸಿ ರಕ್ಷಿಸಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್, ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ರು.

Edited By : Manjunath H D
Kshetra Samachara

Kshetra Samachara

23/12/2021 04:40 pm

Cinque Terre

26.92 K

Cinque Terre

0

ಸಂಬಂಧಿತ ಸುದ್ದಿ