ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ನೇಹಿತನಿಂದಲೇ ಚಾಕು ಇರಿತ: ದೂರು ದಾಖಲು

ಹೆಬ್ರಿ: ಸ್ನೇಹಿತನನ್ನೇ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ನಾಡ್ಪಾಲು ಗ್ರಾಮದ ಸೀತಾನದಿಯಲ್ಲಿ ನಡೆದಿದೆ.

ವಿಶ್ವನಾಥ್ ಕುಲಾಲ್ ಚಾಕು ಇರಿತಕ್ಕೆ ಒಳಗಾದವರಾದರೆ , ಸಂದೇಶ್ ಚಾಕುವಿನಿಂದ ಇರಿದಾತ. ವಿಶ್ವನಾಥ್ ಉಡುಪಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಸಂಜೆ ಬೈಕ್‌ನಲ್ಲಿ ಬರುತ್ತಿರುವಾಗ ಸೀತಾನದಿ ಬಳಿ ಸಂದೇಶ್ , ಅಜೇಯ ಮತ್ತು ರಂಜನ್ ತಂಡ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಇರಿದಿದೆ ಎಂದು ದೂರಲಾಗಿದೆ.

ವಿಶ್ವನಾಥನ ಸ್ನೇಹಿತ ಸಂದೇಶ್ ಕಳೆದ ಎರಡು ವರ್ಷದ ಹಿಂದೆ ಮದ್ಯಪಾನ ಮಾಡಿ ಬಂದು ಬೈದ ವಿಚಾರವಾಗಿ ಮನನೊಂದ ವಿಶ್ವನಾಥ್ 2 ವರ್ಷದಿಂದ ಆತನಲ್ಲಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

22/12/2021 11:50 am

Cinque Terre

11.08 K

Cinque Terre

0